ಪುತ್ತೂರು: ಓಮ್ನಿಯಲ್ಲಿ ಗೋಸಾಗಾಟ; ಇಬ್ಬರ ಸೆರೆ

ಮಂಗಳೂರು: ಓಮ್ನಿಯಲ್ಲಿ ಕರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತರಿಂದ ಜಾನುವಾರು ಮತ್ತು ವಾಹನ ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ.(52) ಮತ್ತು ಚಂದ್ರನ್ ಟಿ.(34) ಎಂದು ಗುರುತಿಸಲಾಗಿದೆ.
ಕೇರಳ ನೋಂದಾಯಿತ ಓಮ್ನಿ ಕಾರನ್ನು ಪುತ್ತೂರಿನ ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಿನ್ನೆ ಸಂಜೆ ಪೊಲೀಸರು ತಡೆದು ನಿಲ್ಲಿಸಿದ ವೇಳೆ ಅಕ್ರಮ ಗೋಸಾಗಾಟ ಬೆಳಕಿಗೆ ಬಂದಿದೆ. ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.