ಪಾಕಿಸ್ತಾನದಲ್ಲಿ ಗಣಿ ಕುಸಿತ: ೨೨ ಮಂದಿ ಮೃತ್ಯು

ಪೇಶಾವರ: ಪಾಕಿಸ್ತಾನದ ಜಿಯಾರತ್‌ ಘರ್‌ ಪರ್ವತ ಪ್ರದೇಶದ ಅಮೃತಶಿಲೆಯ ಕ್ವಾರಿಯಲ್ಲಿ ಗಣಿ ಕುಸಿತ ಸಂಭವಿಸಿದ್ದು, 22 ಮಂದಿ ಸಾವನ್ನಪ್ಪಿದ್ದು, ಅನೇಕರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಉತ್ತಮ ಗುಣಮಟ್ಟದ ಅಮೃತಶಿಲೆಗೆ ಹೆಸರುವಾಸಿಯಾಗಿರುವ ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿನ ಆರು ಘಟಕಗಳ ಅಮೃತಶಿಲೆ ಗಣಿ ಕುಸಿದಿದೆ. ಗಣಿ ಕುಸಿತದಲ್ಲಿ ಈವರೆಗೆ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿದೆ. ರಕ್ಷಣ ಕಾರ್ಯಚರಣೆ ಮುಂದುವರೆದಿದ್ದು, ಕಾರ್ಯಾಚರಣೆಗೆ ಭಾರೀ ಯಂತ್ರೋಪಕರಣಗಳನ್ನು ಉಪಯೋಗಿಸಲಾಗಿದೆ. ಗಣಿಗಳ ಆರು ಘಟಕಗಳಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಭಾರೀ ಗಾತ್ರದ ಬಂಡೆಗಳು ಕಾರ್ಮಿಕರ ಮೇಲೆ ಉರುಳಿ ಬಿದ್ದಿದೆ. ಈ ಸಂದರ್ಭ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ 10 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಅನೇಕ ಮಂದಿ ಪೇಶಾಚರದಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಅಫ್ಘಾನಿಸ್ತಾನದ ಗಡಿಯ ಬಳಿ ಇರುವ ಖೈಬರ್‌‌ ಸಫಿ ಪಟ್ಟಣದವರಾಗಿದ್ದಾರೆ. ಇನ್ನೂ ಅನೇಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್‌ ಅಧಿಕಾರಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *