ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 7 ಮಂದಿ ಮೃತ್ಯು

ಚೆನ್ನೈ: ತಮಿಳುನಾಡಿನ ಕಡ್ಡಲೂರು ಜಿಲ್ಲೆಯ ಕಟ್ಟುಮನ್ನರಕೋಯಿಲ್ ಎಂಬಲ್ಲಿನ ಕುರುಂಗುಡಿ ಗ್ರಾಮದ ಪಟಾಕಿ ಕಾರ್ಖಾನೆಯಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ಏಳು ಮಂದಿ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಪಟಾಕಿ ಕಾರ್ಖಾನೆಯ ಮಾಲಕ ಸ್ಫೋಟದಲ್ಲಿ ಬಲಿಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ಕಟ್ಟಡ ಸಂಪೂರ್ಣ ಹಾನಿಗೊಂಡಿದೆ.
ಪಟಾಕಿ ತಯಾರಿಸಲಾಗುತ್ತಿತ್ತೇ ಅಥವಾ ನಾಡಬಾಂಬ್ ತಯಾರಿಸಲಾಗುತ್ತಿತ್ತೇ ಎನ್ನುವುದು ತಿಳಿದುಬಂದಿಲ್ಲ. ಕಡ್ಡಲೂರು ಎಸ್‍ಪಿ ಅಭಿನವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳು ಸಂಪೂರ್ಣ ಛಿದ್ರಗೊಂಡಿದ್ದು ಗುರುತು ಪತ್ತೆಹಚ್ಚಲು ಶ್ರಮಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *