ತಲಪಾಡಿ: ಮಂಜೇಶ್ವರ ಬಿಜೆಪಿಯಿಂದ ಗಡಿ ಪಾಸ್ ತೆರವಿಗೆ ಒತ್ತಾಯಿಸಿ ಪ್ರತಿಭಟನೆ

ಮಂಗಳೂರು: ಗಡಿ ಪಾಸ್ ತೆರವಿಗೆ ಆಗ್ರಹಿಸಿ ಇಂದು ಮಧ್ಯಾಹ್ನ ಮಂಜೇಶ್ವರ ಬಿಜೆಪಿ ವತಿಯಿಂದ ತಲಪಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತಾಡಿದ ಕಾಸರಗೋಡು ಜಿಲ್ಲೆಯ ಡಿವೈಎಸ್ಪಿ ಹಾಗೂ ಕಲೆಕ್ಟರ್ ಅವರು, ಗಡಿ ದಾಟಿ ಹೋಗುವವರಲ್ಲಿ ಯಾವುದೇ ಪಾಸ್ ಕೇಳುವುದಿಲ್ಲ. ನಾಳೆ ಈ ಕುರಿತು ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಬಳಿಕ ಗಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಅಡ್ವ ಶ್ರೀಕಾಂತ್ ಪ್ರತಿಭಟನೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ವಿಜಯಕುಮಾರ್, ರಾಜ್ಯ ಸದಸ್ಯ ಬಾಲಕೃಷ್ಣ ಶೆಟ್ಟಿ, ಮುರಳೀಧರ ಯಾದವ್, ಸರೋಜಾ ಬಳ್ಳಾಲ್ ,ಸುರೇಶ್ ಕುಮಾರ್ ಶೆಟ್ಟಿ ಬಿಜೆಪಿ ರಾಜ್ಯ ಸಮಿತಿ ಸದಸ್ಯರು, ಅಡ್ವ ಸದಾನಂದ ರೈ ಬಿಜೆಪಿ ಜಿಲ್ಲಾ ಅಧ್ಯಕ್ಷರು, ರಾಜ್ಯ ಒಬಿಸಿ ನೇತಾರ ಅಡ್ವ ನವೀನ್ ರಾಜ್, ಸತ್ಯ ಶಂಕರ್ ಭಟ್, ಮುರಳೀಧರ ಯಾದವ್, ಆದರ್ಶ್ ಮಂಜೇಶ್ವರ, ಪದ್ಮನಾಭ ಕಡಪ್ಪುರ, ಶ್ಯಾಮಲಾ ಪಟ್ಟಡ್ಕ ಮೊದಲಾದ ನಾಯಕರು ಉಪಸ್ಥಿತರಿದ್ದರು.
