ಗೋಕರ್ಣ: ಬಾಲಕರಿಬ್ಬರು ಸಮುದ್ರಪಾಲು, ಓರ್ವನ ಮೃತದೇಹ ಪತ್ತೆ

ಗೋಕರ್ಣ :-   ಗೋಕರ್ಣಕ್ಕೆ ಪ್ರವಾಸ ತೆರಳಿದ್ದ ಮೈಸೂರಿನ ಇಬ್ಬರು ಯುವಕರು ಸಮುದ್ರ ತೀರದಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೈಸೂರಿನಿಂದ ಎಂಟು ಮಂದಿ ಯುವಕರು ಪ್ರವಾಸಕ್ಕೆಂದು ನಿನ್ನೆ ಸಂಜೆ ಗೋಕರ್ಣಕ್ಕೆ ಬಂದಿದ್ದರು. ಸಮುದ್ರ ,ನದಿಯ ತಟಗಳಿಗೆ  ಪ್ರವಾಸ ಹೋಗುವಾಗ ಎಚ್ಚರದಿಂದಿರಿ , ಕಳೆದ ವರ್ಷಗಳಲ್ಲಿ ಇಂತಿಷ್ಟು ಜನರು ಈಜಲು ಹೋಗಿ ಮೃತಪಟ್ಟಿದ್ದಾರೆ ಎಂದು ಬೋರ್ಡುಗಳನ್ನು ಹಾಕಿದರೂ ಯುಜನಾಂಗ ತಮ್ಮದೇ ಪ್ರಾಣದ ಜತೆ ಚೆಲ್ಲಾಟ ಆಡುವುದು ಇನ್ನೂ ಕಡಿಮೆ ಆಗಿಲ್ಲ. ಇಂದು ಬೆಳಿಗ್ಗೆ ಈಜಲೆಂದು ಸಮುದ್ರ ತೀರದಲ್ಲಿ ನೀರಿಗಿಳಿದ ವೇಳೆ ಅಲೆಗಳಿಗೆ ಸಿಕ್ಕು ಇಬ್ಬರು ಕಣ್ಮರೆಯಾಗಿದ್ದಾರೆ. ಓರ್ವ ಯುವಕ ಸುಹಾಸ್(17) ಎಂಬಾತನ ಮೃತದೇಹ ಪತ್ತೆಯಾಗಿದೆ. ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.ಮಂಡ್ಯ ಮೂಲದ ಉಲ್ಲಾಸ್(15) ಎಂಬಾತ ಕಣ್ಮರೆಯಾಗಿರುವ ಬಾಲಕ ಎಂದು ಹೇಳಲಾಗುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೂ ನೀರಿಗಿಳಿದಿದ್ದ ಯುವಕರು ಅಪಾಯದ ಸುಳಿಗೆ ಸಿಲುಕಿದ್ದರು.ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿದ್ದು ಶೋಧ ಕಾರ್ಯ ನಡೆಸಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *