ಗುಡ್ಡ ಕುಸಿದು ಮಾಳ ಘಾಟಿ ರಸ್ತೆ ಬಂದ್: ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಕಾರ್ಕಳ: ಕಳೆದ ಹಲವು ದಿನಗಳ ಮಳೆಯಿಂದ ಉಡುಪಿ ಜಿಲ್ಲೆಯ ಮಾಳ ಘಾಟಿ ರಸ್ತೆಯಲ್ಲಿ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಕುಸಿದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಆದರೆ ಗುಡ್ಡ ಕುಸಿದು ನಾಲ್ಕು ದಿನ ಕಳೆದರೂ ಅದರ ಮಣ್ಣನ್ನು ಇನ್ನೂ ತೆರವುಗೊಳಿಸದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆ ಕಾರ್ಕಳ-ಮಾಳ- ಎಸ್‍ಕೆ ಬಾರ್ಡರ್‍ನಿಂದ ಶೃಂಗೇರಿಗೆ ಮುಖಾಂತರ ಸೋಲಾಪುರ ಹೈವೇಯನ್ನು ಸಂಪರ್ಕಿಸುತ್ತದೆ. ಆದರೆ ರಸ್ತೆ ಕುಸಿತಗೊಂಡಿರುವುದರಿಂದ ಕಳೆದ ನಾಲ್ಕು ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಮಣ್ಣನ್ನು ವಿಲೇವಾರಿಗೊಳಿಸುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದ ಇಡೀ ಘಾಟಿ ನಾಲ್ಕು ದಿನಗಳಿಂದ ಬಂದ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಗೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಇದರಿಂದ ಜನತೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕೂಡಲೇ ಈ ರಸ್ತೆಯ ಮಣ್ಣನ್ನು ವಿಲೇವಾರಿಗೊಳಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕೊಡುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
