ಕ್ರೈಸ್ತ ಯುವಕನ ಮನೆಯಲ್ಲಿ ಹಿಂದೂ ಸೋದರಿಯರು! `ಮತಾಂತರ’ ಆರೋಪ!!

ಮಂಗಳೂರು: ವಿಟ್ಲ ಸಮೀಪದ ಕನ್ಯಾನದ ಕ್ರೈಸ್ತ ಸಮುದಾಯಕ್ಕೆ ಸೇರಿದ ಯುವಕನೊಬ್ಬನ ಮನೆಯಲ್ಲಿ ಮೂವರು ಹಿಂದೂ ಸೋದರಿಯರು ಪತ್ತೆಯಾಗಿದ್ದು ಹಿಂದೂ ಸಂಘಟನೆಗಳು ಇದೊಂದು ಮತಾಂತರ ಯತ್ನ ಎಂದು ಆರೋಪಿಸಿವೆ. ನಾನಾ ಆಮಿಷವನ್ನೊಡ್ಡಿ ಹಿಂದು ಸಮುದಾಯದ ಯುವತಿಯರನ್ನು ಮತಾಂತರ ಮಾಡಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರ ಆರೋಪಿಸಿದ್ದು ಆರೋಪಿಯ ಮನೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ಯುವತಿಯರು ಹಾಗೂ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಕನ್ಯಾನ ಕಾಲೇಜ್ ಸಮೀಪ ಕ್ರೈಸ್ತ ಸಮುದಾಯದ ಯುವಕ ಫ್ಯಾನ್ಸಿ ಅಂಗಡಿ ಹೊಂದಿದ್ದು ಅಲ್ಲಿಗೆ ಬರುತ್ತಿದ್ದ ಯುವತಿಯರಿಗೆ ವಿವಿಧ ಆಮಿಷಗಳನ್ನು ಒಡ್ಡುತ್ತಾ ಅವರನ್ನು ಪುಸಲಾಯಿಸಿ ಕರೆದೊಯ್ಯುತ್ತಿದ್ದ ಎಂದು ಸಂಘಟನೆಗಳು ಆರೋಪಿಸಿವೆ. ಇಂದು ಮಧ್ಯಾಹ್ನ ಕರೋಪಾಡಿ ಗ್ರಾಮದ ಒಂದೇ ಮನೆಯ ಮೂವರು ಸೋದರಿಯರನ್ನು ತನ್ನ ಮನೆಗೆ ಕರೆ ತಂದಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀರಿಗೆ ಮಾಹಿತಿ ನೀಡಿದ್ದು ದಾಳಿ ನಡೆಸಿದ್ದಾರೆ. ಮೂವರನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಅಮಾಯಕ ಹಿಂದು ಯುವತಿಯರ ತಲೆ ಕೆಡಿಸಿ, ಮತಾಂತರಕ್ಕೆ ಯತ್ನಿಸುತ್ತಿದ್ದ ಯುವಕನ ಹಾಗೂ ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ, ಹಿಂದು ಜಾಗರಣ ವೇದಿಕೆ ಆಗ್ರಹಿಸಿದೆ.

Leave a Reply

Your email address will not be published. Required fields are marked *