ಕುಪ್ಪೆಪದವು:ಲ್ಯಾಬ್ ಟೆಕ್ನಿಷನ್ ನಿಂದ ವೈದ್ಯರಿಗೆ ಜೀವಬೆದರಿಕೆ!

ಕುಪ್ಪೆಪದವು: ಇಲ್ಲಿನ ಪ್ರಾಥಮಿಕ ಆರೋಗ್ಯಕೇಂದ್ರದ ಲ್ಯಾಬ್ ಟೆಕ್ನಿಷನ್ ತನಗೆ  ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ರಾಜ್ ,ಬಜಪೆ ಠಾಣೆಗೆ ದೂರು ನೀಡಿದ್ದಾರೆ. ಗುರುವಾರ ಬೆಳಿಗ್ಗೆ ಸುಮಾರು 11ಗಂಟೆಗೆ ಕೋವಿಡ್-19 ಪರೀಕ್ಷೆ ವಿಚಾರಕ್ಕೆ ಸಂಬಂಧಪಟ್ಟಂತೆ ವೈದ್ಯರು ಮತ್ತು ಲ್ಯಾಬ್ ಟೆಕ್ನಿಷನ್ ನಡುವೆ ಮಾತಿನ ಚಕಮಕಿ ನಡೆದಿದ್ದು ಟೆಕ್ನಿಷನ್ ವೈದ್ಯರ ಕೊಠಡಿಗೆ ಬಂದು ಅವಾಚ್ಯಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಒಡ್ಡಿದ್ದಾರೆ ಎಂದು ಡಾ.ಕಿರಣ್ ರಾಜ್ ಆರೋಪಿಸಿದ್ದಾರೆ. 

Leave a Reply

Your email address will not be published. Required fields are marked *