ಕುಂದಾಪುರ: ಬೊಲೆರೋದಲ್ಲಿ ಗೋಸಾಗಾಟ: ಮೂವರ ಮೇಲೆ ಕೇಸ್!

ಕುಂದಾಪುರ: ಠಾಣಾ ಪೊಲೀಸರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ ನಸುಕಿನ ಜಾವ ಧೂಪದಕಟ್ಟೆ ಕಡೆಯಿಂದ ಒಳರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಅದರ ಹಿಂಬದಿ ಒಂದು ಕಪ್ಪು ಬೊಲೆರೊ ವಾಹನ ಚಲಾಯಿಸಿಕೊಂಡು ಬಂದಿದ್ದು ಈ ವಾಹನಗಳನ್ನು ನಿಲ್ಲಿಸಲು ಸೂಚನೆ ನೀಡಿದರೂ ದ್ವಿಚಕ್ರ ವಾಹನ ಚಾಲಕ ವಾಹನ ನಿಲ್ಲಿಸದೆ ಮುಂದಕ್ಕೆ ಹೋಗಿದ್ದು ಅದರ ಹಿಂಬದಿ ಬರುತ್ತಿದ್ದ ಬೊಲೆರೊ ಚಾಲಕನು ವಾಹನವನ್ನು ಸ್ವಲ್ಪ ಹಿಂಬದಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಇನ್ನೊರ್ವನೊಂದಿಗೆ ಪರಾರಿಯಾಗಿರುತ್ತಾನೆ.
KA 46 M 0344 ನೇ ಬೊಲೆರೋದ ಒಳಗೆ ನೋಡುವಾಗ ಹಿಂಬದಿ ಸೀಟ್‌ ತೆಗೆದು ಅದರಲ್ಲಿ 3 ಗಂಡು ಕರುಕರುಗಳನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಕಟ್ಟಿ ತುಂಬಿ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಈ ಜಾನುವಾರುಗಳನ್ನು ಆರೋಪಿಗಳು ಎಲ್ಲಿಂದಲೋ ಕಳವು ಮಾಡಿ ಯಾವುದೇ ಪರವಾನಿಗೆ ಇಲ್ಲದೆ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಮೂವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.
ಆರೋಪಿಗಳನ್ನು ಸಮೀರ್ ಕಂಡ್ಲೂರು, ಮುತಾಯಬ್, ರಿದಾನ್ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *