ಕಂಗನಾಗೆ `ವೈ ಪ್ಲಸ್’ ಭದ್ರತೆ!

ಮುಂಬೈ: ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿರುವ ಬಾಲಿವುಡ್ ನಟಿ ಕಂಗನಾ ರನೌತ್ಗೆ `ವೈ ಪ್ಲಸ್’ ಭದ್ರತೆ ಒದಗಿಸಲಾಗುವುದು ಎಂದು ಗೃಹ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ. ಕಂಗನಾ ಅವರೊಂದಿಗೆ ಓರ್ವ ಭದ್ರತಾ ಅಧಿಕಾರಿ, ಕಮಾಂಡೋಗಳ ಸಹಿತ 11 ಪೊಲೀಸರು ಇರಲಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಕಂಗನಾ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭ ಭದ್ರತೆ ಒದಗಿಸಲಾಗುವುದು. ಆಕೆ ಮುಂಬೈಗೆ ಭೇಟಿ ನೀಡುವ ವೇಳೆಯೂ ಭದ್ರತೆಯನ್ನು ವಿಸ್ತರಿಸಲಾಗುವುದು ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜಯರಾಮ್ ಠಾಕೂರ್ ತಿಳಿಸಿದ್ದಾರೆ.