ಐಪಿಎಲ್‌ನಲ್ಲಿ ಭಜ್ಜಿ ಆಟವೂ ಅನುಮಾನ!

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಇನ್ನು ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಅದರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಸಮಸ್ಯೆಗಳಿನ್ನೂ ಕೊನೆಗೊಂಡಿಲ್ಲ. ಅತ್ತ ತಂಡದ ಪ್ರಮುಖ ಆಟಗಾರರಾದ ದೀಪಕ್‌ ಚಾಹರ್‌, ಸುರೇಶ್‌ ರೈನಾ ಮುಂತಾದ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದು, ಇದೀಗ ಸಿಎಸ್‌ಕೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಕೂಡ ಈ ಬಾರಿ ಸಿಎಸ್‌ಕೆ ಪರ ಆಡೋದು ಅನುಮಾನ ಎನ್ನಲಾಗುತ್ತಿದೆ.
ಸಿಎಸ್‌ಕೆ ತಂಡದಲ್ಲಿ ಇಬ್ಬರು ಆಟಗಾರರು ಸೇರಿ 11-12 ಮಂದಿಗೆ ಕೊರೊನಾ ಈಗಾಗಲೇ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಸುರೇಶ್ ರೈನಾ ಫ್ರಾಂಚೈಸಿ ಜೊತೆಗಿನ ವೈಮನಸ್ಸಿನಿಂದ ಈ ಬಾರಿ ಸಿಎಸ್‌ಕೆಯಲ್ಲಿ ಆಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಭಜ್ಜಿ ಕೂಡ ಚೆನ್ನೈನಲ್ಲಿ ಆಡುವುದು ಅನುಮಾನ ಎಂದು ವರದಿಯೊಂದು ಹೇಳಿದೆ. ವಿರಾಟ್ ಕೊಹ್ಲಿ, ಮೂಲಗಳ ಪ್ರಕಾರ, ಹರ್ಭಜನ್ ಸಿಂಗ್ ಐಪಿಎಲ್‌ಗಾಗಿ ಮಂಗಳವಾರ (ಸೆಪ್ಟೆಂಬರ್ 1) ದುಬೈ ವಿಮಾನಯಾನ ಕೈಗೊಳ್ಳಬೇಕಿತ್ತು. ಆದರೆ ಸಿಎಸ್‌ಕೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದಾಗಿ ಭಜ್ಜಿ ದುಬೈಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ‘ಮಂಗಳವಾರ ಹರ್ಭಜನ್ ಸಿಂಗ್ ಸಿಎಸ್‌ಕೆ ತಂಡವನ್ನು ಸೇರಿಕೊಳ್ಳಬೇಕಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ಸದ್ಯದ ಪರಿಸ್ಥಿತಿ ಹರ್ಭಜನ್ ಅವರನ್ನು ತುಂಬಾ ಚಿಂತೆಗೀಡು ಮಾಡಿದೆ. ಈಗಾಗಿ ಭಜ್ಜಿ ಒಂದೋ ಅವರ ವೇಳಾಪಟ್ಟಿಯನ್ನು ಬದಲಿಸಬಹುದು. ಅಥವಾ ಈ ವರ್ಷದ ಐಪಿಎಲ್ ಅನ್ನು ತಪ್ಪಿಸಿಕೊಳ್ಳಬಹುದು,’ ಎಂದು ಭಜ್ಜಿಗೆ ಆಪ್ತ ಮೂಲವೊಂದು ಮಾಹಿತಿ ನೀಡಿದೆ.

Leave a Reply

Your email address will not be published. Required fields are marked *