ಆಶ್ಲೀಲ ಮೆಸೇಜ್‌ :ಕಾಮುಕನಿಗೆ ಥಳಿತ

ಮಡಿಕೇರಿ  ಸೆ.17:-  ಮೊಬೈಲ್‌ಗೆ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ  ಮಹಿಳೆಯರ  ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಕಳುಹಿಸುತಿದ್ದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ  ಬುಧವಾರ ಬೆಳಿಗ್ಗೆ ನಡೆದಿದೆ.  ಖಾಸಗಿ ಬಸ್‌ ನಿಲ್ದಾಣದ ಬಳಿ ಮೊಬೈಲ್‌ ಅಂಗಡಿ ಹೊಂದಿರುವ    ಮೊಹಮದ್‌ ಮುದಾಸಿರ್‌  ಎಂಬ  ಕಾಮ ಕ್ರಿಮಿಯು ಮಹಿಳೆಯರಿಗೆ  ಲೈಂಗಿಕ ಕಿರುಕುಳ ನೀಡುವುದನ್ನೇ ಪೂರ್ಣಾವಧೀ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ  ಎನ್ನಲಾಗಿದೆ. ಕಳೆದ ೧೫ ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರ ಮೊಬೈಲ್‌ ನಂಬರ್‌  ತಿಳಿದುಕೊಂಡಿದ್ದ ಈತ ರಾತ್ರಿ ಹೊತ್ತಿನಲ್ಲಿ ಆಶ್ಲೀಲ ಮೆಸೇಜ್‌ ಕಳಿಸಿ ಮಾನಸಿಕ ಹಿಂಸೆ ನೀಡಿದ್ದ. ಮಹಿಳೆಯು ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ತಿಳಿಸಿದ್ದರು. ಕಾರ್ಯಕರ್ತರ ಸೂಚನೆಯಂತೆ  ಮಹಿಳೆಯ ಮೊಬೈಲ್‌ ನಿಂದ   ಬುಧವಾರ ಬೆಳಿಗ್ಗೆ  ೯ ಘಂಟೆಗೆ  ಹಳೆ ಆರ್‌ ಟಿ ಓ ಕಚೇರಿಯ ಬಳಿ ಬರುವಂತೆ ಮೆಸೇಜ್‌ ಕಳಿಸಲಾಯಿತು. ಖುಷಿಯಿಂದ  ಸಮಯಕ್ಕೆ ಸರಿಯಾಗಿ ಬಂದ ಕಾಮುಕನಿಗೆ ಕಾರ್ಯಕರ್ತರು  ಹಿಗ್ಗಾ ಮುಗ್ಗಾ ಥಳಿಸಿ ಪೋಲೀಸರಿಗೆ ಒಪ್ಪಿಸಿದರು. ಈತನ ವಿರುದ್ದ  ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈತನು ಫೇಸ್‌ ಬುಕ್‌ ನಿಂದಲೂ ಮಹಿಳೆಯರಿಗೆ ಅಸಭ್ಯ ಮೆಸೇಜ್‌ ಕಳುಹಿಸುತ್ತಿದ್ದಾನೆ ಎಂದು ತನಿಖೆಯಲ್ಲಿ  ತಿಳಿದು ಬಂದಿದೆ. 

Leave a Reply

Your email address will not be published. Required fields are marked *