ಹೈಕೋರ್ಟ್ ಸಿವಿಲ್ ಜಡ್ಜ್ ಆಗಿ ಆಸ್ರಿನಾ ಪ್ರಮಾಣವಚನ

ಬೆಂಗಳೂರು: 2019ರಲ್ಲಿ ರಾಜ್ಯ ಹೈಕೋರ್ಟ್ ನಡೆಸಿದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಕುಮಾರಿ ಆಸ್ರಿನಾ ಅವರು ಸಿವಿಲ್ ನ್ಯಾಯಾಧೀಶರಾಗಿ ರಾಜ್ಯ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾರವರಿಂದ ಇತ್ತೀಚಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಆಸ್ರಿನಾ ಮಂಗಳೂರಿನ ಧರ್ಮಸ್ಥಳ ಕಾನೂನು ಕಾಲೇಜಿನಲ್ಲಿ ಪದವಿಯನ್ನು ಪಡೆದು ಮಂಗಳೂರು ವಕೀಲರ ಸಂಘದ ಸದಸ್ಯೆಯಾಗಿ ಮಂಗಳೂರಿನ ವಕೀಲರಾದ ಮಯೂರ ಕೀರ್ತಿ ಮತ್ತು ಶರತ್ ಕುಮಾರ್ ಅಸೋಸಿಯೇಟ್ಸ್ ನಲ್ಲಿ ವಕೀಲರಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಟಿಪಳ್ಳದ ಅಕ್ಬರ್ ಅಲಿ-ಆಸ್ಮಾ ದಂಪತಿಯ ಪುತ್ರಿಯಾಗಿದ್ದಾರೆ.