ಹಾಕಿ: ನಾಯಕ ಸೇರಿ ಐವರಿಗೆ ಕೊರೊನಾ

ಬೆಂಗಳೂರು: ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‍ಪ್ರೀತ್ ಸಿಂಗ್ ಹಾಗೂ ಇತರ ಮೂವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಎಂದು ದೃಢವಾಗಿದೆ.
ಬೆಂಗಳೂರಿನ ಎಸ್‍ಎಐ ದಕ್ಷಿಣ ಕೇಂದ್ರದಲ್ಲಿ ನಡೆದಿದ್ದ ಹಾಕಿ ಶಿಬಿರಕ್ಕೆ ಮರಳಿರುವ ಎಲ್ಲಾ ಆಟಗಾರರಿಗೆ ಕೋವಿಡ್ 19 ಟೆಸ್ಟ್ ಮಾಡಲಾಗಿದೆ. ಈ ವೇಳೆ ಮನ್‍ಪ್ರೀತ್ ಸಿಂಗ್, ಡಿಫೆಂಡರ್ ಸುರೇಂದ್ರ ಕುಮಾರ್, ಜಸ್ಕರನ್ ಸಿಂಗ್ ಹಾಗೂ ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್‌, ಗೋಲ್‌ಕೀಪರ್‌ ಕ್ರಿಶನ್‌ ಬಿ. ಪಾತಕ್‌ಗೆ ಕೋವಿಡ್ 19 ಪಾಸಿಟಿವ್ ಎಂದು ವರದಿ ಬಂದಿದೆ. ಈ ಸಂಬಂಧ ಮಾತನಾಡಿರುವ ಮನ್‍ಪ್ರೀತ್‍ಸಿಂಗ್, ನಾನು ಎಸ್‍ಎಐ ಕ್ಯಾಂಪಸ್‍ನಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದೇನೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿಭಾಯಿಸಿದ ರೀತಿ ನನಗೆ ತುಂಬಾ ಖುಷಿ ನೀಡಿತು. ನನ್ನ ಆರೋಗ್ಯ ಸ್ಥಿರವಾಗಿದ್ದು, ಆದಷ್ಟು ಬೇಗ ಗುಣಮುಖರಾಗಿ ಬರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *