ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಮುಸ್ತಾಫಾ ನಿಧನ: ಸಾವಿನಲ್ಲಿ ಗೊಂದಲ!

ಮಂಗಳೂರು: ನಗರದ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಮುಸ್ತಫಾ(59) ಅವರು ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾರುಕಟ್ಟೆ ಸ್ಥಳಾಂತರ, ವರ್ತಕರ ಪ್ರತಿಭಟನೆ ಇದೆಲ್ಲದರ ಮಧ್ಯೆ ಅಧ್ಯಕ್ಷರೇ ಕೊನೆಯುಸಿರೆಳೆದಿರುವುದು ಜನಸಾಮಾನ್ಯರಲ್ಲಿ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಮುಸ್ತಫಾ ಅವರು ಸೆಂಟ್ರಲ್ ಮಾರುಕಟ್ಟೆ ಸ್ಥಳಾಂತರ ವಿರೋಧಿಸಿದ್ದವರಲ್ಲಿ ಮುಂಚೂಣಿಯಲ್ಲಿದ್ದರು. ಅಲ್ಪಕಾಲದ ಅಸೌಖ್ಯದಿಂದಾಗಿ ಮುಸ್ತಫಾ ಅವರು ಸಾವಿಗೀಡಾದರು ಎನ್ನಲಾಗುತ್ತಿದೆ. ಮುಸ್ತಫಾ ಅವರು ನಗರದ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಆದರೂ ಚಿಕಿತ್ಸೆ ಫಲಿಸಲಿಲ್ಲ ಎಂದು ಹೇಳಲಾಗುತ್ತಿದೆ. ಸೆಂಟ್ರಲ್ ಮಾರುಕಟ್ಟೆ ಹೋರಾಟದ ಮಧ್ಯೆಯೇ ಮುಸ್ತಫಾ ವಿಧಿವಶರಾಗಿರುವುದು ವರ್ತಕರ ಆತಂಕ ಹೆಚ್ಚಿಸಿದೆ.