ಸುಶಾಂತ್ ಕೇಸ್ ಸಿಬಿಐಗೆ: ಸತ್ಯ ಮೇಲುಗೈ ಸಾಧಿಸಲಿ ಎಂದ ನಟ ಅಕ್ಷಯ್

ಹೊಸದಿಲ್ಲಿ: ಇತ್ತೀಚೆಗೆ ನಿಗೂಢ ರೀತಿಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ನಟ ಸುಶಾಂತ್ ಸಿಂಗ್ ರಾಜ್ಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್, ಕಂಗನಾ ರಣಾವತ್ ಹಾಗೂ ಕೃತಿ ಸೆನನ್ ಮತ್ತಿತರರು ಸ್ವಾಗತಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಶಾಂತ್ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಭಾರೀ ಒತ್ತಾಯ ಕೇಳಿಬಂದಿರುವ ಬೆನ್ನಿಗೆ ಸುಪ್ರೀಂ ಕೋರ್ಟ್ ಸಿಬಿಐಗೆ ಒಪ್ಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಕ್ಷಯ್, ಸತ್ಯ ಯಾವಾಗಲೂ ಮೇಲುಗೈ ಸಾಧಿಸಲಿ ಎಂದು ಹೇಳಿದ್ದಾರೆ. ಎಸ್ ಎಸ್ ಆರ್ ವಾರಿಯರ್ಸ್ಗೆ ಧನ್ಯವಾದಗಳು. ಸಾಮೂಹಿಕ ಪ್ರಜ್ಞೆ ಬಲವಾದ ಶಕ್ತಿ ಇದೇ ಮೊದಲ ಬಾರಿ ಕಾಣಿಸಿತ್ತು. ಮಾನವೀಯತೆ ಗೆದ್ದಿದೆ. ಎಸ್ಎಸ್ಆರ್ ವಾರಿಯರ್ಸ್ನ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಕಂಗನಾ ಹೇಳಿದ್ದಾರೆ.