ಸುಳ್ಯ: ಧರೆ ಕುಸಿದು ಮನೆಗೆ ಹಾನಿ

ಮಂಗಳೂರು: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಎಂಬಲ್ಲಿ ಮನೆಯೊಂದರ ಸಮೀಪದ ಧರೆ ಕುಸಿದು ಮನೆಗೆ ಹಾನಿಯುಂಟಾದ ಘಟನೆ ನಡೆದಿದೆ. ಮೊರಂಗಲ್ಲು ಶಿವರಾಮ ರೈಯವರ ಮನೆ ಹಿಂಬದಿಯ ಧರೆ ಭಾರೀ ಪ್ರಮಾಣದಲ್ಲಿ ನಿನ್ನೆ ರಾತ್ರಿ ಕುಸಿದು ಘಟನೆ ಸಂಭಿವಿಸಿದೆ. ಶಿವರಾಮ ರೈ ದಂಪತಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಶೆಡ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಸ್ವಲ್ಪ ಹಾನಿಯಾಗಿದೆ.