`ಸಬ್ ಸ್ಕ್ರೈಬ್’ ಬದಲು `ಸಪರಕರೈಸ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಉಳ್ಳಾಲದ ಬಾಲಕ!

ಮಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಾಲಕನೊಬ್ಬ ತನ್ನ ವಿಡಿಯೋವನ್ನು ನೋಡಲು ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಎನ್ನುವ ಬದಲು ಪದೇ ಪದೇ `ಸಪರಕರೈಸ್’ ಮಾಡಿ ಎಂದು ಉಚ್ಛರಿಸಿದ 30 ಸೆಕೆಂಡುಗಳ ವಿಡಿಯೋ ಹರಿದಾಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ. ನೋಡಿದವರು ಬಾಲಕನ ಉಚ್ಛರಣೆ ಕಂಡು ನಕ್ಕು ನೀರಾಗುತ್ತಿದ್ದರೆ ಖ್ಯಾತ ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಕೂಡಾ ಕಮೆಂಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ 35 ಲಕ್ಷಕ್ಕೂ ಜಾಸ್ತಿ ಮಂದಿ ವೀಕ್ಷಿಸಿದ್ದಾರೆ.
ಉಳ್ಳಾಲದ ಬಬ್ಬುಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ಓದುತ್ತಿರುವ ತೊಕ್ಕೊಟ್ಟು ನಿವಾಸಿ ಅಬ್ದುಲ್ ರೆಹಮಾನ್ ಎಂಬ ಬಾಲಕ ಸರಪಕರೈಸ್, ಸಪರಕರೈಸ್ ಎಂದು ಉಚ್ಛರಿಸಿ ರಾತ್ರಿ ಬೆಳಗಾಗುವುದರೊಳಗೆ ಮಿಂಚಿದ್ದಾನೆ. ಬಾಲಕ ವಿಡಿಯೋದಲ್ಲಿ ನನ್ನ ವಿಡಿಯೋ ಸಪರಕರೈಸ್ ಮಾಡಿ, ನಾನು 1 ಮಿಲಿಯನ್ ವೀವ್ಸ್ ಪಡೆಯಬೇಕು ಎಂದು ತಪ್ಪುತಪ್ಪಾಗಿ ಉಚ್ಛರಿಸಿದ್ದರೂ ಬಾಲಕನ ಮುಗ್ಧತೆಗೆ ನೆಟ್ಟಿಗರು ಮನಸೋತಿದ್ದಾರೆ.

Leave a Reply

Your email address will not be published. Required fields are marked *