ಶೃಂಗೇರಿ: ಜ್ಯುವೆಲ್ಲರಿಯಿಂದ ಹಾಡಹಗಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ!

ಚಿಕ್ಕಮಗಳೂರು: ಶೃಂಗೇರಿಯ `ನಾಗಪ್ಪ ಶೇಟ್ ಜ್ಯುವೆಲ್ಲರ್ಸ್’ನಲ್ಲಿ ದರೋಡೆಕೋರನೋರ್ವ ಹಾಡಹಗಲೇ ಸಿಬ್ಬಂದಿಯ ಕಣ್ಮುಂದೆಯೇ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿದ್ದು ಸಿಸಿ ಕೆಮರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಮಧ್ಯಾಹ್ನದ ವೇಳೆ ಜ್ಯುವೆಲ್ಲರಿ ಶಾಪ್ ನಲ್ಲಿ ಗ್ರಾಹಕರು ಇಲ್ಲದ ವೇಳೆ ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಒಳಬಂದ ಆರೋಪಿ ಏಕಾಏಕಿ ಚಿನ್ನಾಭರಣಗಳನ್ನು ಜೋಡಿಸಿಟ್ಟ ಕಡೆ ಹಾರಿ ಅಲ್ಲಿದ್ದ ಚಿನ್ನದ ಸರಗಳನ್ನು ಸೆಳೆದು ತನ್ನ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿದ್ದಾನೆ. ಈ ವೇಳೆ ಓರ್ವ ಮಹಿಳಾ ಸಿಬ್ಬಂದಿ ಆತನ ಕೈಯನ್ನು ಹಿಡಿದುಕೊಂಡಿದ್ದಾರೆ, ಇನ್ನೊಬ್ಬ ಮಹಿಳಾ ಸಿಬ್ಬಂದಿ ಕುರ್ಚಿಯಿಂದ ಆತನ ಮೇಲೆ ಹಲ್ಲೆ ಮಾಡಿದರೂ ಆತ ಬಿಡಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಆರೋಪಿ ಪಕ್ಕದ ತೋಟದ ಮಧ್ಯೆ ಓಡಿದ್ದು ಬಳಿಕ ಬಟ್ಟೆ ಬದಲಾಯೊಸಿ ಬೈಕ್ ನಲ್ಲಿ ಪರಾರಿಯಾಗಿರುವ ಮಾಹಿತಿ ತಿಳಿಸಿದೆ. ಶೃಂಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ…

Leave a Reply

Your email address will not be published. Required fields are marked *