ಕಳತ್ತೂರಿನಲ್ಲಿ ನಡೆದಿದ್ದು ಮಾರಿಗುಡಿಯ ಸಾಂಪ್ರದಾಯಿಕ ಕೋಳಿ ಅಂಕ

ಕಾರ್ಕಳ: ಕಳತ್ತೂರು ಗ್ರಾಮದ ಮಾರಿಪೂಜೆಯ ವೇಳೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ ನಡೆದಿದ್ದು, ಈ ಬಗ್ಗೆ ಕೆಲವರು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ ಕಾರಣ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಸಂಪ್ರದಾಯದ ಬಗ್ಗೆ ಅರ್ಥ ಮಾಡಿಕೊಂಡ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕ್ಯಾಟರಿಂಗ್ ಮಾಲಕರು ರಂಗನಾಥ ಶೆಟ್ಟಿ ಸ್ಪಷ್ಟೀಕರಿಸಿದ್ದಾರೆ.

ಕಳತ್ತೂರು ಗ್ರಾಮದಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿ ರಂಗನಾಥ ಶೆಟ್ಟಿಯವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿತ್ತು ಎಂದು ಸುದ್ದಿಯನ್ನು ವಾಟ್ಸಾಪ್ ನಲ್ಲಿ ಹರಿಯಬಿಡಲಾಗಿತ್ತು. ಆದರೆ ಕಳತ್ತೂರು ಗ್ರಾಮದಲ್ಲಿ ಮಾರಿಪೂಜೆಯ ವೇಳೆ ವರ್ಷಕ್ಕೆ ಎರಡು ಬಾರಿ ದೇವಿಯ ಪ್ರೀತ್ಯಾರ್ಥವಾಗಿ ಗ್ರಾಮಸ್ಥರು ಸೇರುವ ಮೂಲಕ ಸಾಂಪ್ರದಾಯಿಕ ಕೋಳಿ ಅಂಕ ನಡೆಯುತ್ತದೆ. ಅದರಂತೆ ನಿನ್ನೆಯೂ ಮಾರಿಗುಡಿಗೆ ಸಂಬಂಧಪಟ್ಟ ಕೆಲವೇ ಕೆಲವು ಮಂದಿ ಭಾಗವಹಿಸಿ ಸಾಂಪ್ರದಾಯಿಕ ಕೋಳಿ ಅಂಕ ನಡೆಸಿ ತೆರಳಿದ್ದರು.

ಆದರೆ ಇದನ್ನು ಸಹಿಸದ ಕೆಲವರು ಕೋಳಿ ಅಂಕ ನಡೆದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸಾಂಪ್ರದಾಯಿಕ ಕೋಳಿ ಅಂಕದ ಬಗ್ಗೆ ಮಾಹಿತಿ ಅರಿತು ಇಲ್ಲಿಂದ ತೆರಳಿದ್ದಾರೆ ಎಂದು ರಂಗನಾಥ ಶೆಟ್ಟಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *