`ಶಬ್ನಂ ಡೆವಲಪರ್ಸ್’ ಮೇಲೆ ದಾಳಿ ನಡೆಸಿದ್ದ ಪೂಜಾರಿ ಸಹಚರ ಅರೆಸ್ಟ್!

ಮಂಗಳೂರು: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 2007ರಲ್ಲಿ ಬೆಂಗಳೂರಿನ
ಶಬ್ನಂ ಡೆವಲಪರ್ಸ್’ ಸಂಸ್ಥೆ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್ ದಾಳಿ ನಡೆಸಿ ಇಬ್ಬರನ್ನು ಕೊಂದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಇಕ್ಲಾಕ್ ಖುರೇಷಿ(45) ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಉತ್ತರ ಪ್ರದೇಶದ ಮುಜಾಫರ್ ನಗರ ಮೂಲದ ಇಕ್ಲಾಕ್ ಖುರೇಷಿಯನ್ನು ಶಬ್ನಂ ಡೆವಲಪರ್ಸ್ ಶೂಟೌಟ್ ಪ್ರಕರಣದಲ್ಲಿ ಹಿಂದೆಯೇ ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರಬಂದಿದ್ದ ಇಕ್ಲಾಕ್ ನ್ಯಾಯಾಲಯಕ್ಕೆ ಹಾಜರಾಗದೆ ಮರೆಸಿಕೊಂಡಿದ್ದ. ಶೂಟೌಟ್ ಗೆ ತನ್ನ ಸಹಚರರ ಜೊತೆಗೂಡಿ ಇಕ್ಲಾಕ್ ಖುರೇಷಿ ಪಿಸ್ತೂಲ್ ಸಪ್ಲೆ ಮಾಡಿದ್ದ ಆರೋಪ ಹೊತ್ತಿದ್ದಾನೆ.