ಪೊಲೀಸರ ಮೇಲಿನ ದ್ವೇಷಕ್ಕೆ ಶಂಕರಾಚಾರ್ಯ ಪ್ರತಿಮೆಗೆ ಎಸ್ ಡಿಪಿಐ ಧ್ವಜ ಕಟ್ಟಿದ್ದ ಕಿರಾತಕ!

ಶೃಂಗೇರಿ: ಇಲ್ಲಿನ ಶಂಕರಾಚಾರ್ಯ ಪ್ರತಿಮೆಯ ಮೇಲೆ ಎಸ್ ಡಿಪಿಐ ಬಾವುಟ ಕಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಿಡಿಗೇಡಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಿಲಿಂದಾ ಅಲಿಯಾಸ್ ಮಿಲ್ಲಿ ಪ್ರಕರಣದ ಆರೋಪಿ. ಈತ ಕುಖ್ಯಾತ ಕಳ್ಳನಾಗಿದ್ದು ಇತ್ತೀಚೆಗಷ್ಟೇ ಕಳ್ಳತನ ಪ್ರಕರಣವೊಂದದಲ್ಲಿ ಭಾಗಿಯಾಗಿ ಶೃಂಗೇರಿ ಪೊಲೀಸರ ವಶವಾಗಿದ್ದ. ಹೀಗಾಗಿ ಪೊಲೀಸರ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಗಲಭೆ ಹರಡಲು ಮುಂದಾಗಿದ್ದ ಆಘಾತಕಾರಿ ಸಂಗತಿಯನ್ನು ಆರೋಪಿ ಬಾಯ್ಬಿಟ್ಟಿದ್ದಾನೆ.
ಪೊಲೀಸರು ತನಿಖೆ ಕೈಗೊಂಡು ಪ್ರತಿಮೆ ಇರುವ ಸ್ಥಳಕ್ಕೆ ಸಮೀಪದ ಕಟ್ಟಡವೊಂದರ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು ಈ ವೇಳೆ ಆರೋಪಿಯ ಕೃತ್ಯ ಬೆಳಕಿಗೆಬ ಬಂದಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ತನಿಖೆ ಮುಂದುವರಿದಿದೆ.