ವಿಷ್ಣುವರ್ಧನ್ ಅಭಿಮಾನಿ ಆತ್ಮಹತ್ಯೆ

ದಾವಣಗೆರೆ: ನಟ ದಿ.ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದ ಲೋಕೇಶ್ ಇಂದು ಮಧ್ಯಾಹ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 40 ವರ್ಷದ ಲೋಕೇಶ್ ನಗರದ ಬಸ್ ನಿಲ್ದಾಣದ ಎದುರಿನ ಭಾರತ ಡಾಬಾ ಪಕ್ಕದಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದರು. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಸುದ್ದಿಯಲ್ಲಿದ್ದರು.
ದಾವಣಗೆರೆಯಲ್ಲಿ ವಿಷ್ಣುವರ್ಧನ್ ಅವರ ಡೈಲಾಗ್ ಹೇಳುತ್ತಾ ರಂಜಿಸುತ್ತಿದ್ದರು. ಅಪಾರ ಸಂಖ್ಯೆಯ ಸ್ನೇಹಿತ ಬಳಗವನ್ನು ಹೊಂದಿದ್ದ ಲೋಕೇಶ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಟಿಜೆ ನಗರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *