ವಿಶ್ವಾಸಮತ ಗೆದ್ದ ಗೆಹ್ಲೋಟ್ ಸರಕಾರ, ಬಿಜೆಪಿಗೆ ಭಾರೀ ಮುಖಭಂಗ!

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರಕಾರ ವಿಶ್ವಾಸಮತ ಗೆದ್ದಿದೆ. ಪ್ರತಿಪಕ್ಷ ಬಿಜೆಪಿ ಹಾಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಇಂದು ರಾಜಸ್ಥಾನ ವಿಧಾನಸಭೆ ಕಲಾಪ ಆರಂಭವಾದ ಸಂದರ್ಭ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡನೆ ಮಾಡಿತ್ತು. ಆದರೆ ಸರಕಾರ ವಿಶ್ವಾಸಮತ ಗೆಲ್ಲುವ ಮೂಲಕ ಬಿಜೆಪಿ ಮುಖಂಡರು ಭಾರೀ ಮುಖಭಂಗ ಅನುಭವಿಸಿದ್ದಾರೆ.
ನಂತರ ಮಾಧ್ಯಮಗಳ ಮುಂದೆ ಮಾತಾಡಿದ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ `ಸರ್ಕಾರ ಬಹುಮತ ಗೆದ್ದಿದೆ. ಸರಕಾರವನ್ನು ಬೀಳಿಸಲು ಪ್ರತಿಪಕ್ಷ ಮಾಡಿದ ಅನೇಕ ಪ್ರಯತ್ನಗಳು ವಿಫಲವಾಗಿವೆ. ಜನರು ಸರಕಾರದ ಪರವಾಗಿದ್ದಾರೆ’ ಎಂದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಬಂಡಾಯದ ಬಾವುಟ ಹಾರಿಸಿದ್ದರು. 18 ಶಾಸಕರು ಸಚಿನ್ ಪೈಲೆಟ್ ಜೊತೆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಉಂಟಾಗಿದ್ದ ಕಾರಣ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ರಾಜಸ್ಥಾನ ವಿಧಾನಸಭೆಯ ಬಲ 200. ಸರ್ಕಾರ ಬಹುಮತ ಸಾಬೀತು ಮಾಡಲು ಅಗತ್ಯವಿದ್ದ ಮ್ಯಾಜಿಕ್ ನಂಬರ್ 101. ಅಶೋಕ್ ಗೆಹ್ಲೋಟ್ ಸರಕಾರಕ್ಕೆ 125 ಶಾಸಕರು ಬೆಂಬಲ ಸೂಚಿಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದ ಪ್ರತಿಪಕ್ಷ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.

Leave a Reply

Your email address will not be published. Required fields are marked *