ವಿವಾದಕ್ಕೆರವಾದ ಪ್ರಧಾನಿ ಮೋದಿ ಮತ್ತು ನವಿಲು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ನವಿಲುಗಳಿಗೆ ಕಾಳು ತಿನ್ನಿಸುವ ವಿಡಿಯೋವನ್ನು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 1.47 ನಿಮಿಷದ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಕಚೇರಿ ಮತ್ತು ಲೋಕ ಕಲ್ಯಾಣ ಮಾರ್ಗ ನಿವಾಸದ ನಡುವೆ ವಾಯು ವಿಹಾರದ ಸಂದರ್ಭದಲ್ಲಿ ನವಿಲುಗಳು ಓಡಾಡುವ, ಗರಿಬಿಚ್ಚಿ ನಲಿದಾಡುವ ಮತ್ತು ಪ್ರಧಾನಿ ಅವುಗಳಿಗೆ ಕಾಳು ತಿನ್ನಿಸುವ ದೃಶ್ಯಗಳಿವೆ. ಆದರೆ ಇದೇ ವಿಡಿಯೋ ಇದೀಗ ಸೋಷಿಯನ್ ಮೀಡಿಯಾದಲ್ಲಿ ಹೊಸ ವಿವಾದ ಸೃಷ್ಟಿಸಿದೆ.
ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಷೆಡ್ಯೂಲ್ 1ರ ಸೆಕ್ಷನ್ 2ಎ ಅಡಿ ನವಿಲನ್ನು ಪರಿಗಣಿಸಲಾಗಿದೆ. ಈ ಕಾಯ್ದೆಯನ್ವಯ ಯಾರಾದರೂ ನವಿಲನ್ನು ಸಾಕುವುದು ಅಥವಾ ತಮ್ಮ ವಶದಲ್ಲಿ ಇರಿಸಿಕೊಳ್ಳುವುದು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸುಮಾರು 60,000 ರೂವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಪಡಿಸಬಹುದು. ಮೋದಿ ನಿವಾಸದಲ್ಲಿ ಇರುವುದು ಸಾಕಿದ ಅಥವಾ ವಶದಲ್ಲಿ ಇರುವುದು ಆಗಿದ್ದರೂ ಕಾನೂನು ಪ್ರಕಾರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬ ವಾದ ಜೋರಾಗಿ ನಡೆಯುತ್ತಿದೆ. ನವಿಲು ಸಾಕದೆ ವಾಸಸ್ಥಾನದಲ್ಲೇ ಇರುವುದಾದರೂ ಅಪರಾಧದ ಭಾಗವೇ ಆಗಿದೆ. ಏಕೆಂದರೆ ನವಿಲುಗಳು ವಾಸಿಸಬೇಕಾದ ಸಹಜ ಬೆಟ್ಟ ಗುಡ್ಡಗಳನ್ನು ಮನುಷ್ಯರು ಆಕ್ರಮಿಸಿಕೊಂಡಿದ್ದಾರೆ. ನಗರೀಕರಣ, ಅರಣ್ಯ ನಾಶ, ಅತಿಕ್ರಮಣ ಮುಂತಾದ ಕಾರಣದಿಂದ ನವಿಲುಗಳು ಆವಾಸಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಈ ಕಾರಣದಿಂದಾಗಿ ಮನುಷ್ಯರು ವಾವಿಸುವ ಜಾಗಕ್ಕೆ ಬಂದು ಅವರ ಬಳಕೆಯನ್ನು ಅದು ರೂಢಿಸಿಕೊಳ್ಳುವಂತಾಗಿದೆ. ಅವುಗಳು ಸಹಜ ಜೀವನ ಕಳೆದುಕೊಳ್ಳಲು ಕೂಡ ಸರ್ಕಾರವೇ ಹೊಣೆ ಎಂದು ಸಹ ಆರೋಪಿಸಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 30 ಲಕ್ಷ ದಾಟಿದೆ. ಸೋಂಕು ಪ್ರಮಾಣ ತಗ್ಗಿಸಲು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ಮೋದಿ ಅವರು ನವಿಲಿನ ಜತೆಗೆ ಫೋಟೊ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಲಾಗಿದೆ. ದೇಶವು ಕೋವಿಡ್‍ನಿಂದ ನರಳುತ್ತಿದೆ. ಆರ್ಥಿಕತೆ ನಾಶವಾಗಿದೆ, 2 ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ. ಲಡಾಖ್ ಭೂಮಿಯನ್ನು ಚೀನಾ ಕಬಳಿಸುತ್ತಿದೆ. ವಿದ್ಯಾರ್ಥಿಗಳು ಸಹಾಯಕ್ಕೆ ಯಾಚಿಸುತ್ತಿದ್ದಾರೆ. ಆದರೆ ಮೋದಿ ನವಿಲಿನ ಜತೆಗೆ ನರ್ತಿಸುತ್ತಿದ್ದಾರೆ ಎಂದು ಟೀಕಿಸಲಾಗಿದೆ. ಆದರೆ ಇನ್ನೂ ಅನೇಕರು ಮೋದಿ ಸರಳತೆಯನ್ನು ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *