ವಿಮಾನ ದುರಂತ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಮಂದಿಗೆ ಕೊರೊನಾ!

ತಿರುವನಂತಪುರಂ: ಕೇರಳದಲ್ಲಿ ಕೆಲದಿನಗಳ ಹಿಂದೆ ನಡೆದಿದ್ದ ವಿಮಾನ ದುರಂತ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಮಂದಿಗೆ ಕೊರೊನಾ ಸೋಂಕು ತಗಲಿರುವ ಮಾಹಿತಿ ಲಭ್ಯವಾಗಿದೆ. ದುಬೈನಿಂದ 190 ಮಂದಿಯನ್ನು ಹೊತ್ತು ತರುತ್ತಿದ್ದ ಏರ್ ಇಂಡಿಯಾ ವಿಮಾನ ಮಳೆಯಿದ್ದ ಕಾರಣ ರನ್‍ವೇನಲ್ಲಿ ಎಡವಿ ಎರಡು ಹೋಳಾಗಿತ್ತು. ಮೂರ್ನಾಲ್ಕು ಗಂಟೆಗಳ ಸತತ ಕಾರ್ಯಾಚರಣೆ ನಡೆದತ್ತು. ಘಟನೆಯಲ್ಲಿ 18 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು. ಇಬ್ಬರು ಪೈಲಟ್ ಕೂಡ ಸಾವನ್ನಪ್ಪಿದ್ದರು. 150 ಮಂದಿಗೆ ಗಾಯಗಳಾಗಿತ್ತು. ಬದುಕುಳಿದ ಪ್ರಯಾಣಿಕರಿಗೂ ಕೂಡ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಸುರಕ್ಷತಾ ನಿಯಮ ಉಲ್ಲಂಘಿಸಿದ ಆರೋಪದಡಿ ಏರ್ ಏಷ್ಯಾದ ಇಬ್ಬರು ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

Leave a Reply

Your email address will not be published. Required fields are marked *