ವರ್ಣರಂಜಿತ ಸಿಪಿಎಲ್‌ಗೆ ಇಂದು ಚಾಲನೆ

ಜಮೈಕಾ: ಮಹಾಮಾರಿ ಕೊರೊನಾ ಸೋಂಕು ವಿಶ್ವಾದ್ಯಂತ ವ್ಯಾಪಾರ ಕ್ಷೇತ್ರಕ್ಕೆ ಭಾರೀ ಹಾನಿ ಮಾಡಿರುವ ಜೊತೆಗೆ ಕ್ರೀಡಾ ಕ್ಷೇತ್ರವನ್ನು ಕೂಡ ಬಿಟ್ಟಿಲ್ಲ. ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿದೆ. ಸದ್ಯ ನಿಧಾನವಾಗಿ ಕ್ರೀಡೆಗಳು ನಡೆಯಲು ಆರಂಭವಾಗಿದ್ದು, ಇದೀಗ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಕೂಡ ಸೇರಿದೆ. ಇಂದು (ಆಗಸ್ಟ್‌ ೧೮) ಸಿಪಿಎಲ್‌ಗೆ ಚಾಲನೆ ಸಿಗಲಿದ್ದು, ಸಹಜವಾಗಿಯೇ ಕ್ರಿಕೆಟ್‌ ಪ್ರಿಯರಲ್ಲಿ ಉತ್ಸಾಹ ಮನೆಮಾಡಿದೆ. ಸೆಪ್ಟೆಂಬರ್‌ ೧೦ಕ್ಕೆ ಫೈನಲ್‌ ಹಣಾಹಣಿ ನಡೆಯಲಿದೆ.
ಮುಖ್ಯವಾಗಿ ಸಿಪಿಎಲ್‌ ಕೊರೊನಾ ನಂತರ ನಡೆಯುತ್ತಿರುವ ಮೊದಲ ಕ್ರಿಕೆಟ್‌ ಲೀಗ್‌ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಕ್ರಿಕೆಟಿಗರ ಕಣ್ಣು ಸಹಜವಾಗಿಯೇ ಇದರತ್ತ ನೆಟ್ಟಿದೆ. ಅಲ್ಲದೆ ವಿಶ್ವದ ಘಟಾನಘಟಿಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ಟೂರ್ನಿಯ ಪ್ರಸಿದ್ಧಿಗೆ ಮತ್ತಷ್ಟು ಮೆರಗು ನೀಡಿದೆ. ಕೊರೊನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ ಕ್ರಿಕೆಟ್ ಸ್ಥಬ್ಧವಾದನಂತರ ಈಗಾಗಲೇ ಕ್ರಿಕೆಟ್‌ಗೆ ಮರು ಚಾಲನೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನಚ್ಚರಿಕೆಯೊಂದಿಗೆ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಪ್ರತೀ ತಂಡಕ್ಕೂ ಬಯೋ ಸೆಕ್ಯೂರ್ ಬಬಲ್ ನಿರ್ಮಿಸಿ ಆ ಮೂಲಕ ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿದೆ. ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಲಿದ್ದು ಎಲ್ಲಾ ಆಟಗಾರರು ಕೂಡಾ ಈಗಾಗಲೇ ಡ್ರೆನಿಡಾಡ್&ಟೊಬ್ಯಾಗೋ ಸೇರಿಕೊಂಡಿದ್ದಾರೆ. ತಮ್ಮ ತಂಡಗಳ ಜೊತೆಗೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಬಾರಿಯ ಸಿಪಿಎಲ್‌ ಟೂರ್ನಿ ಕೇವಲ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿದೆ. ಒಟ್ಟು 33 ಪಂದ್ಯಗಳಲ್ಲಿ 23 ಪಂದ್ಯಗಳು ತರೊಬಾದಲ್ಲಿರುವ ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿದೆ. ಇದರಲ್ಲಿ ಸೆಮಿ ಪೈನಲ್ ಮತ್ತು ಫೈನಲ್ ಕೂಡ ಸೇರಿದೆ. ಇನ್ನುಳಿದ 10 ಪಂದ್ಯಗಳು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆಯೋಜನೆಯಾಗಲಿದೆ. 2013ರಲ್ಲಿ ಆರಂಭವಾದ ಕೆರಿಬಿಯನ್ ಪ್ರೀಮಿಯರ್ ಲೀಗ್ ಹಂತ ಹಂತವಾಗಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದೆ. ಈಗ ಪ್ರಮುಖ ಕ್ರಿಕೆಟ್ ಟೂರ್ನಿಯಗಳಲ್ಲಿ ಒಂದೆನಿಸಿದ್ದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳನ್ನು ಟಿವಿ ಮೂಲಕ ತಲುಪುವಲ್ಲಿ ಯಶಸ್ವಿಯಾಗುತ್ತಿದೆ. ಖ್ಯಾತ ವಿದೇಶಿ ಆಟಗಾರರು ಕೂಡ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವುದು ಲೀಗ್‌ನ ಖ್ಯಾತಿಯನ್ನು ಹೆಚ್ಚಿಸಿದೆ.

ತಂಡಗಳು:
ಟ್ರಿನ್‌ಬಾಗೊ ನೈಟ್ ರೈಡರ್ಸ್: ಡ್ವೇನ್ ಬ್ರಾವೋ, ಕೀರನ್ ಪೊಲಾರ್ಡ್, ಸುನಿಲ್ ನರೈನ್, ಕಾಲಿನ್ ಮುನ್ರೊ, ಫವಾದ್ ಅಹ್ಮದ್, ಡ್ಯಾರೆನ್ ಬ್ರಾವೋ, ಲೆಂಡ್ಲ್ ಸಿಮ್ಮನ್ಸ್, ಖಾರಿ ಪಿಯರೆ, ಟಿಮ್ ಸೀಫರ್ಟ್, ಸಿಕಂದರ್ ರಾಝಾ, ಆಂಡರ್ಸನ್ ಫಿಲಿಪ್, ಪ್ರವೀಣ್ ತಾಂಬೆ, ಜೇಡೆನ್ ಸೀಲ್ಸ್, ಅಮೀರ್ ಜಂಗೂ, ಟಿಯಾನ್ ವೆಬ್‌ಸ್ಟರ್ ಹೊಸೈನ್, ಮುಹಮ್ಮದ್ ಅಲಿ ಖಾನ್.

ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯಾಟ್ಸ್:‌ ಕ್ರಿಸ್ ಲಿನ್, ಬೆನ್ ಡಂಕ್, ಎವಿನ್ ಲೂಯಿಸ್, ನಿಕ್ ಕೆಲ್ಲಿ, ಸೊಹೈಲ್ ತನ್ವೀರ್, ಇಶ್ ಸೋಧಿ, ಶೆಲ್ಡನ್ ಕಾಟ್ರೆಲ್, ದಿನೇಶ್‌ ರಾಮ್ದಿನ್‌, ರಾಯದ್ ಎಮ್ರಿತ್, ಇಮ್ರಾನ್ ಖಾನ್, ಅಲ್ಜಾರಿ ಜೋಸೆಫ್, ಜೋಶುವಾ ಡಿ ಸಿಲ್ವಾ, ಡೊಮಿನಿಕ್ ಡ್ರೇಕ್ಸ್, ಕಾಲಿನ್ ಆರ್ಚಿಬಾಲ್ಡ್, ಜಾನ್ ರಸ್ ಜಗ್ಗರ್, ಜಹ್ಮರ್ ಹ್ಯಾಮಿಲ್ಟನ್.

ಜಮೈಕಾ ತಲ್ಲಾವಾಸ್: ಆಂಡ್ರೆ ರಸ್ಸೆಲ್, ಸಂದೀಪ್ ಲಮಿಚಾನೆ, ಕಾರ್ಲೋಸ್ ಬ್ರಾಥ್‌ವೈಟ್, ರೋವ್ಮನ್ ಪೊವೆಲ್, ಮುಜೀಬ್ ಉರ್ ರಹಮಾನ್, ಗ್ಲೆನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಓಶೇನ್ ಥಾಮಸ್, ಆಸಿಫ್ ಅಲಿ, ಫಿಡೆಲ್ ಎಡ್ವರ್ಡ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಜೆರ್ಮೈನ್ ಬ್ಲ್ಯಾಕ್‌ವುಡ್, ನಿಕೋಲಸ್ ಕಿರ್ಟನ್, ರಾಮಲ್ ಲೂಯಿಸ್ ಪರ್ಮಾಲ್, ರಿಯಾನ್ ಪರ್ಸೌಡ್.

ಬಾರ್ಬಡೋಸ್ ಟ್ರೈಡೆಂಟ್ಸ್: ರಶೀದ್ ಖಾನ್, ಜೇಸನ್ ಹೋಲ್ಡರ್, ಕೋರೆ ಆಂಡರ್ಸನ್, ಶಮರ್ ಬ್ರೂಕ್ಸ್, ಮಿಚೆಲ್ ಸ್ಯಾಂಟ್ನರ್, ಜಾನ್ಸನ್ ಚಾರ್ಲ್ಸ್, ಶೈ ಹೋಪ್, ಹೇಡನ್ ವಾಲ್ಷ್ ಜೂನಿಯರ್, ಆಶ್ಲೇ ನರ್ಸ್, ಜೊನಾಥನ್ ಕಾರ್ಟರ್, ರೇಮನ್ ರೀಫರ್, ಕೈಲ್ ಮೇಯರ್ಸ್, ಜೋಶುವಾ ಬಿಷಪ್, ನಯೀಮ್ ಯಂಗ್, ಜಸ್ಟಿನ್ ಗ್ರೀವ್ಸ್, ಕಿಯೋನ್ ಹಾರ್ಡಿಂಗ್, ಶಯಾನ್ ಜಹಾಂಗೀರ್.

ಸೇಂಟ್ ಲೂಸಿಯಾ ಝಾಕ್ಸ್:‌ ರೋಸ್ಟನ್ ಚೇಸ್, ಮೊಹಮ್ಮದ್ ನಬಿ, ಡೇರೆನ್ ಸ್ಯಾಮಿ, ನಜೀಬುಲ್ಲಾ ಖಾದ್ರಾನ್, ಆಂಡ್ರೆ ಫ್ಲೆಚರ್, ಕೆಸ್ರಿಕ್ ವಿಲಿಯಮ್ಸ್, ಸ್ಕಾಟ್ ಕುಗ್ಗಲೀಜ್ನ್, ಚೆಮರ್ ಹೋಲ್ಡರ್, ಒಬೆಡ್ ಮೆಕಾಯ್, ರಾಹಕೀಮ್ ಕಾರ್ನ್‌ವಾಲ್, ಮಾರ್ಕ್ ಡಯಾಲ್, ಜಹೀರ್ ಖಾನ್, ಕಿಮಾನಿ ಮೆಲಿಯಸ್, ಲೆವೆಲಿಕೊ ಬೌಚರ್ ಗ್ಲೆನ್, ಸಾದ್ ಬಿನ್ ಜಾಫರ್.

ಗಯಾನಾ ಅಮೆಜಾನ್ ವಾರಿಯರ್ಸ್: ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ಗ್ರೀನ್, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ನವೀನ್-ಉಲ್-ಹಕ್, ಚಂದ್ರಪುಲ್ ಹೆಮರಾಜ್, ಕೆವಿನ್ ಸಿಂಕ್ಲೇರ್, ಅಶ್ಮೀದ್ ನೆಡ್, ಓಡಿಯನ್ ಸ್ಮಿತ್ ಬ್ರಾಂಬಲ್, ಜಸ್ದಿಯೊ ಸಿಂಗ್, ಕಿಸ್ಸೂಂದಾತ್ ಮ್ಯಾಗ್ರಾಮ್.

Leave a Reply

Your email address will not be published. Required fields are marked *