ರುತುರಾಜ್‌ ಗಾಯಕ್ವಾಡ್‌ಗೂ ಕೊರೊನಾ ಸೋಂಕು

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಚಾಂಪಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ನ ಆಟಗಾರ ದೀಪಕ್ ಚಹಾರ್‌ಗೆ ಈಗಾಗಲೇ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಸಿಎಸ್‌ಕೆ ತಂಡದಲ್ಲಿ ಓರ್ವ ಆಟಗಾರ ಸೇರಿ 12 ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ವರದಿಯಾಗಿತ್ತು. ಆದರೆ ಇದರ ನಡುವೆ ತಂಡದ ಮತ್ತೋರ್ವ ಯುವ ಆಟಗಾರ ರುತುರಾಜ್‌ ಗಾಯಕ್ವಾಡ್‌ ಕೂಡ ಇದೀಗ ಸೋಂಕಿಗೆ ಒಳಗಾಗಿದಾರೆ.
ಇಬ್ಬರು ಆಟಗಾರರು ಸೇರಿದಂತೆ ಐಪಿಎಲ್‌ನ ೧೩ ಮಂದಿ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಆದರೆ ಹೆಸರು ಬಹಿರಂಗ ಪಡಿಸಿರಲಿಲ್ಲ. ಇದೀಗ ಆಟಗಾರರ ಹೆಸರು ಬಹಿರಂಗವಾಗಿದೆ. ಐಪಿಎಲ್‌ ತಂಡಗಳಲ್ಲಿ ಕೊರೊನಾ ಪ್ರಕರಣ ಕಂಡು ಬರುತ್ತಿರುವುದನ್ನು ಗಮನಿಸಿರುವ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಘೋಷಿಸಲು ಮಾಡಿದ್ದ ನಿರ್ಧಾರವನ್ನು ಹಿಡಿದಿಟ್ಟುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐಯು 2020ರ ಐಪಿಎಲ್ ವೇಳಾಪಟ್ಟಿಯನ್ನು ಈ ವಾರದ ಅಂತ್ಯಕ್ಕೆ ಘೋಷಿಸುವ ನಿರೀಕ್ಷೆಯಿದೆ. ಅಂದರೆ ಟೂರ್ನಿ ಆರಂಭಕ್ಕೆ ಎರಡು ವಾರ ಮುಂಚಿತವಾಗಿ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಸದ್ಯ ಎಲ್ಲಾ ಐಪಿಎಲ್ ತಂಡಗಳು ಅಭ್ಯಾಸದಲ್ಲಿ ತೊಡಗಿಕೊಂಡಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಕ್ರಮಗಳು ಜಾರಿಯಲ್ಲಿವೆ ಮತ್ತು ಪಂದ್ಯಾವಳಿಗೆ ಕೊರೊನಾದಿಂದ ತಕ್ಷಣದ ಬೆದರಿಕೆ ಇಲ್ಲ. ಆದರೆ ಈ ಬೆಳವಣಿಗೆಯಿಂದಾಗಿ ಐಪಿಎಲ್ ವೇಳಾಪಟ್ಟಿ ಘೋಷಣೆ ವಿಳಂಬವಾಗಿದೆ,’ ಎಂದು ಬಿಸಿಸಿಐ ಮೂಲವೊಂದು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಅತ್ತ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ರಮುಖ ಬೌಲರ್ಸ್‌ಗಳಲ್ಲಿ ಒಬ್ಬರಾಗಿದ್ದ ಚಹಾರ್‌ ಅನುಪಸ್ಥಿತಿ ಸಿಎಸ್‌ಕೆ ತಂಡಕ್ಕೆ ಹೆಚ್ಚು ಕಾಡಲಿದೆ.

Leave a Reply

Your email address will not be published. Required fields are marked *