ರಾಮಮಂದಿರ ಭೂಮಿಪೂಜೆಗೆ ಹಿಂದುಳಿದ ವರ್ಗಗಳ ಕಡೆಗಣನೆ – ಬಿಜೆಪಿ ಮಿತ್ರಪಕ್ಷ ಆರೋಪ

ಹೊಸದಿಲ್ಲಿ: ಅಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗಿದೆ ಎಂದು ಉತ್ತರ ಪ್ರದೇಶ ಸರಕಾರದಲ್ಲಿ ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳ(ಎಸ್) ಶಾಸಕ ಚೌಧುರಿ ಅಮರ್ ಸಿಂಗ್ ಆರೋಪಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತೋರಿಸಿರುವ ಅವಸರವನ್ನು ಬಡವರಿಗೆ ಮನೆಗಳ ನಿರ್ಮಾಣ ಹಾಗೂ ಪಿಂಚಣಿ ನೀಡುವಲ್ಲಿ ತೋರಿಸಬೇಕು ಎಂದು ಅವರು ಹೇಳಿದ್ದಾರೆ.
`ರಾಮ ಮಂದಿರಕ್ಕಾಗಿ ಶ್ರಮ ಪಟ್ಟವರ ಮುಖಗಳು ಕಾಣಿಸುತ್ತಿಲ್ಲ. ಮಂದಿರ ನಿರ್ಮಾಣಕ್ಕಾಗಿ ರಚಿಸಲಾದ ಟ್ರಸ್ಟ್ ನಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರನ್ನು ಸೇರಿಸಲಾಗಿಲ್ಲ. ಶ್ರೀರಾಮ ಕೇವಲ ಬಿಜೆಪಿಗೆ ಮಾತ್ರ ಮೀಸಲು ಎಂಬಂತಿದೆ ಎಂಬುದಾಗಿ ಅಮರ್ ಸಿಂಗ್ ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *