ಯುವನಾಯಕ ವಿವೇಕ್ ರಾಜ್ ರಿಂದ ಡಿಕೆಶಿಗೆ ವಿಷ್ಣು ಪೈಂಟಿಂಗ್ ಗಿಫ್ಟ್!

ಮಂಗಳೂರು: ರಾಜ್ಯ ಕಾಂಗ್ರೆಸ್ ಗೆ ಡಿಕೆ ಶಿವಕುಮಾರ್ ಸಾರಥ್ಯ ವಹಿಸಿಕೊಂಡ ಬಳಿಕ ಯವಜನತೆ ಪಕ್ಷದತ್ತ ಹೆಚ್ಚೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯುವಕರು ಬೆಳೆಯಬೇಕು ಎನ್ನುವ ಡಿಕೆ ಶಿವಕುಮಾರ್ ಮಾತಿನಂತೆ ಪಕ್ಷದಲ್ಲಿ ಸದಾ ಕ್ರಿಯಾಶೀಲರಾಗಿದ್ದು ಯುವಕರನ್ನು ಉತ್ತೇಜಿಸುತ್ತಿರುವವರು ಉದ್ಯಮಿ ವಿವೇಕ್ ರಾಜ್ ಅವರು. ಮಂಗಳೂರಿನ ಜನತೆಗೆ ಚಿರಪರಿಚಿತರಾದ ವಿವೇಕ್ ರಾಜ್ ಅವರು ಡಿಕೆ ಶಿವಕುಮಾರ್ ಅವರ ಸಹಕಾರದಲ್ಲಿ ರಾಜಕೀಯದಲ್ಲಿ ಬೆಳೆಯಲು ಮನಸ್ಸು ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ವಿಷ್ಣುದೇವರ ಪೈಂಟಿಂಗ್ ಅನ್ನು ನೀಡಿರುವ ವಿವೇಕ್ ರಾಜ್ ಅವರು ಶಿವಕುಮಾರ್ ಎಂಟ್ರಿಯಿಂದ ಕಾಂಗ್ರೆಸ್ ಪಕ್ಷ ಮತ್ತೆ ರಾಜ್ಯದಲ್ಲಿ ಯಶಸ್ವಿಯಾಗಿ ಬೆಳೆಯಲಿ, ನನ್ನಂತ ಅನೇಕ ಯುವಜನತೆಗೆ ರಾಜ್ಯ ರಾಜಕಾರಣದಲ್ಲಿ ಬೆಂಬಲ ಪ್ರೋತ್ಸಾಹ ನೀಡುತ್ತಿರುವ ಡಿಕೆಶಿ ಅವರು ರಾಜಕೀಯದಲ್ಲಿ ಇನ್ನಷ್ಟು ಮೇಲಕ್ಕೇರಲಿ ಎಂದು ಆಶಿಸಿದ್ದಾರೆ. ಅಂದಹಾಗೆ ವಿಷ್ಣು ದೇವರ ಪೈಂಟಿಂಗ್ ಅನ್ನು 72 ದಿನಗಳ ಕಾಲ ಪೈಂಟಿಂಗ್ ಮಾಡಲಾಗಿದ್ದರೆ ಖುದ್ದು ವಿವೇಕ್ ರಾಜ್ ಅವರು ಪೂಜೆ ಮಾಡಿ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ. ಡಿಕೆಶಿ ಅವರಂಥ ಯುವನಾಯಕ ಪಕ್ಷಕ್ಕೆ ಅಗತ್ಯವಿತ್ತು. ಈಗ ಆ ಕೊರತೆ ನೀಗಿದೆ. ಮುಂದೆ ವಿವೇಕ್ ರಾಜ್ ರಂತಹ ಯುವಕರ ಕಣ್ಮಣಿ ರಾಜ್ಯ ರಾಜಕೀಯದಲ್ಲಿ ಮುಂಚೂಣಿಗೆ ಬರಲಿ ಎಂದು ಕಾಂಗ್ರೆಸ್ ಹಿರಿಯ ನಾಯಕರು ಪತ್ರಿಕೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *