ಯುಎಇಗೆ ಪ್ರಯಾಣ ಬೆಳೆಸಿದ ಆರ್ಸಿಬಿ

ಬೆಂಗಳೂರು: ಐಪಿಎಲ್ನ 13ನೇ ಆವೃತ್ತಿ ಯುಎಇನಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆ ದುಬೈಗೆ ಪ್ರಯಾಣವನ್ನು ಬೆಳೆಸಿದೆ. ಆರ್ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರಯಾಣಕ್ಕೂ ಮುನ್ನ ತಂಡದ ಫೊಟೋವನ್ನು ಹಂಚಿಕೊಳ್ಳಲಾಗಿದೆ.
ಆರ್ಸಿಬಿ ತಂಡದ ಬಹುತೇಕ ಆಟಗಾರರು ಬೆಂಗಳೂರಿನ ಹೋಟೆಲ್ನಲ್ಲಿ ಕ್ವಾರಂಟೈನ್ ಪೂರೈಸಿದ್ದಾರೆ. ನಿನ್ನೆ ಇಡೀ ತಂಡ ಬೆಂಗಳೂರಿನಿಂದಲೇ ನೇರವಾಗಿ ದುಬೈಗೆ ಪ್ರಯಾಣಿಸಿದೆ. ದುಬೈ ಹೋಟೆಲ್ನಲ್ಲಿ 7 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದ ನಂತರ ಆರ್ಸಿಬಿ ತಂಡದ ಆಟಗಾರರು ಅಭ್ಯಾಸವನ್ನು ನಡೆಸಲಿದ್ದಾರೆ. 40 ಮಂದಿಯ ತಂಡ 21 ಆಟಗಾರರ ಸಹಿತ ಒಟ್ಟು ಯುಎಇಗೆ ತೆರಳಲಿರುವ 40 ಮಂದಿಯ ತಂಡವನ್ನು ಇತ್ತೀಚೆಗೆ ಆರ್ಸಿಬಿ ಪ್ರಕಟಿಸಿತ್ತು. ಮಾನಸಿಕ ಆರೋಗ್ಯದ ದೃಷ್ಠಿಯಿಂದ ಪರಿಣತ ಡಾಕ್ಟರ್ ಕೂಡ ಈ ತಂಡದಲ್ಲಿದ್ದಾರೆ. ಈ ಮೂಲಕ ಅತ್ಯಂತ ವ್ಯವಸ್ಥಿತವಾಗಿ ಈ ಬಾರಿಯ ಐಪಿಎಲ್ ಆವೃತ್ತಿಗೆ ಯುಎಇ ಸಜ್ಜಾಗಿದೆ. ಸುಸಜ್ಜಿತ ಹೋಟೆಲ್ನಲ್ಲಿ ಆರ್ಸಿಬಿ ಆರ್ಸಿಬಿ ತಂಡ ಯುಎಇನಲ್ಲಿ ಅತ್ಯಂತ ಸುಸಜ್ಜಿತ ವಾಲ್ಡಾರ್ಫ್ ಹೋಟೆಲ್ನಲ್ಲಿ ವಾಸ್ತವ್ಯವನ್ನು ಹೂಡಲಿದೆ. ಸಾಕಷ್ಟು ವಿಶೇಷತೆಯನ್ನು ಹೊಂದಿರುವ ಈ ಹೋಟೆಲ್ ಐಪಿಎಲ್ ಪಂದ್ಯ ನಡೆಯುವ ಶಾರ್ಜಾ, ಅಬುದಾಬಿ ಹಾಗೂ ದುಬೈ ಕ್ರಿಡಾಂಗಣಗಳಿಗೆ ಬಹುತೇಕ ಸಮಾನ ಅಂತರದಲ್ಲಿದೆ. ಇನ್ನು ಮತ್ತೊಂದೆಡೆ ಈ ಬಾರಿಯ ಐಪಿಎಲ್ನಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಅಗತ್ಯವಿದ್ದ ಅಲ್ಲಿನ ಸರ್ಕಾರದ ಅನುಮತಿ ದೊರೆತಿದ್ದು ಆಗಸ್ಟ್ 22ಕ್ಕೆ ಆ ಆಟಗಾರರು ಕೂಡ ದುಬೈಗೆ ತಲುಪಲಿದ್ದಾರೆ. ಆರ್ಸಿಬಿ ತಂಡದ ಎಬಿ ಡಿವಿಲಿಯರ್ಸ್ ಡೇಲ್ ಸ್ಟೈನ್, ಕ್ರಿಸ್ ಮೋರಿಸ್ ಇಂದು (ಶನಿವಾರ) ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.