ಮೋದಿ `ಮನ್ ಕೀ ಬಾತ್’ಗೆ ಲಕ್ಷಾಂತರ ಡಿಸ್ ಲೈಕ್ಸ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತಾಡುವ ಪ್ರತೀ ತಿಂಗಳ ಕೊನೆಯ ಭಾನುವಾರ ನಡೆಸುವ
ಮನ್ ಕೀ ಬಾತ್’ ಕಾರ್ಯಕ್ರಮಕ್ಕೆ ಈ ಬಾರಿ ಲಕ್ಷಾಂತರ ಮಂದಿ ಡಿಸ್ ಲೈಕ್ ಬಟನ್ ಒತ್ತಿದ್ದಾರೆ. ಈ ಹಿಂದೆಲ್ಲ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಭರ್ಜರಿ ಲೈಕ್ಸ್ ಬರುತ್ತಿದ್ದು ಈ ಬಾರಿ ಮಾತ್ರ ಉಲ್ಟಾ ಆಗಿದೆ. ಭಾರತೀಯ ಜನತಾ ಪಾರ್ಟಿಯ ಯ್ಯೂಟ್ಯೂಬ್ ಚಾನಲ್‍ನಲ್ಲಿ ಪ್ರಸಾರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ 68ನೇ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಿಸಿದ ಮಂದಿಯಲ್ಲಿ 67 ಸಾವಿರಕ್ಕೂ ಅಧಿಕ ಮಂದಿ ಲೈಕ್ ಬಟನ್ ಒತ್ತಿದ್ದರೆ ಇನ್ನುಳಿದ 6 ಲಕ್ಷಕ್ಕೂ ಅಧಿಕ ಮಂದಿ ಡಿಸ್‍ಲೈಕ್ ಕ್ಲಿಕ್ ಮಾಡಿದ್ದಾರೆ. ಕಾರ್ಯಕ್ರಮವನ್ನು ಪ್ರಸಾರ ಮಾಡಿರುವ ಪಿಎಂಓ ಇಂಡಿಯಾ, ನರೇಂದ್ರ ಮೋದಿ, ಬಿಜೆಪಿ ಮತ್ತು ಡಿಡಿ ವಾಹಿನಿ ಯೂಟ್ಯೂಬ್ ಚಾನೆಲ್‍ನಲ್ಲಿಯೂ ಕೂಡಾ ಲೈಕ್ಸ್‍ಗಿಂತ ಅಧಿಕ ಡಿಸ್‍ಲೈಕ್ ಬಂದಿದೆ.
ನಿನ್ನೆ ಮಾತಾಡಿದ ಪ್ರಧಾನಿ ಮೋದಿಯವರು, ಕೊರೊನಾ, ಓಣಂ ಆಚರಣೆ, ಆಟಿಕೆ ಉದ್ಯಮ ಮೊದಲಾದ ಬಗ್ಗೆ ಮಾತನಾಡಿದ್ದಾರೆ. ಡಿಸ್‍ಲೈಕ್ ಗಳನ್ನು ಅಧಿಕವಾಗಿ ಯುವ ಜನರು ಮಾಡಿರುವುದು ವಿಶೇಷವಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.