ಮೋದಿಗೆ ರಕ್ಷಾ ಬಂಧನ ಕಳುಹಿಸಿದ ಪಾಕಿಸ್ತಾನದ ಸೋದರಿ!

ನವದೆಹಲಿ: ಅಣ್ಣ-ತಂಗಿ ಬಾಂಧವ್ಯ ಸಾರುವ ರಕ್ಷಾಬಂಧನ ಹಬ್ಬಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರಧಾನಿ ಮೋದಿಯವರಿಗೆ ಪ್ರತೀ ವರ್ಷ ರಕ್ಷಾಬಂಧನ ಕಳುಹಿಸುತ್ತಿರುವ ಪಾಕಿಸ್ತಾನದ ಖಮರ್ ಮೊಹ್ಸಿನ್ ಶೇಖ್ ಈ ಬಾರಿಯೂ ಅಂಚೆ ಮೂಲಕ ರಕ್ಷಾಬಂಧನ ಕಳುಹಿಸಿ ಮೋದಿಯವರಿಗೆ ಶುಭ ಹಾರೈಸಿದ್ದಾರೆ.
ಭಾರತೀಯನನ್ನು ಮದುವೆಯಾಗಿ ಅಹ್ಮದಾಬಾದ್ ನಲ್ಲಿ ನೆಲೆಸಿರುವ ಖಮರ್ ಮೊಹ್ಸಿನ್ ಈ ಬಾರಿ ಮೋದಿಯವರನ್ನು ಭೇಟಿಯಾಗಿ ರಕ್ಷಾಬಂಧನ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಹೀಗಾಗಿ ಅಂಚೆ ಮೂಲಕ ರಕ್ಷಾಬಂಧನ ಕಳುಹಿಸಿದ್ದಾರೆ. ಕಳೆದ 25 ವರ್ಷಗಳಿಂದಲೂ ಮೋದಿಯವರಿಗೆ ರಕ್ಷಾಬಂಧನ ಕಳುಹಿಸುತ್ತಿರುವ ಖಮರ್ ಮೊಹ್ಸಿನ್ ಕಳೆದ ವರ್ಷ ಮೋದಿಯವರನ್ನು ಭೇಟಿಯಾಗಿ ರಕ್ಷೆಯನ್ನು ಕಟ್ಟಿದ್ದರು.