ಮೂಲ್ಕಿ-ಸಸಿಹಿತ್ಲುವಿನಲ್ಲಿ ಭಾರೀ ಗಾಳಿ ಮಳೆಯಿಂದ ಮನೆಗೆ ಹಾನಿ, ಧರೆಗುರುಳಿದ ತಂತಿಕಂಬಗಳು!

ಮೂಲ್ಕಿ: ಮೂಲ್ಕಿ ಸುತ್ತಮುತ್ತ ನಿನ್ನೆಯಿಂದ ವ್ಯಾಪಕ ಮಳೆಯಾಗುತ್ತಿದ್ದು ಇಲ್ಲಿಗೆ ಸಮೀಪದ ಕೆ.ಎಸ್. ರಾವ್ ನಗರದ ಕೆಇಬಿ ರಸ್ತೆ ನಿವಾಸಿ ಸುಲೋಚನ ನಾಯರ್ ಎಂಬವರಿಗೆ ಸೇರಿದ ಮನೆ ತೀವ್ರ ಬಿರುಗಾಳಿ ಮಳೆಯಿಂದಾಗಿ ಸಂಪೂರ್ಣ ಕುಸಿದುಬಿದ್ದಿದೆ. ಮನೆಯ ಒಳಗಡೆ ಇದ್ದ ಸುಲೋಚನಾ ಎಂಬವರ ತಲೆಗೆ ಗಂಭೀರ ಗಾಯಗೊಂಡಿದ್ದು ಮನೆಯೊಳಗಿದ್ದ ಸೂರಜ್, ಜಯಲಕ್ಷ್ಮಿ, ರಕ್ಷಿತ್, ದೇವಿಕಾ ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಮನೆ ಕುಸಿತದಿಂದ ಸುಮಾರು 15 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಮುಲ್ಕಿ ವಿಶೇಷ ತಹಶಿಲ್ದಾರ್ ಮಾಣಿಕ್ಯ ಎನ್. ಭೇಟಿ ನೀಡಿದ್ದಾರೆ.
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಕೆರೆಯ ಹತ್ತಿರದ ಖಾಸಗಿ ಜಮೀನಿನ ತೆಂಗಿನ ಮರವೊಂದು ಗಾಳಿ ಮಳೆಗೆ ಸಿಲುಕಿ ತುಂಡಾಗಿ ಬಿದ್ದು ಮೂರು ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.
ಇಂದು ಬೆಳಿಗ್ಗೆ ನಡೆದ ಈ ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ದೇವಳದ ಗೋಪಾಲ ಪಾತ್ರಿ ಹಾಗೂ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ನಾರಾಯಣ ಕರ್ಕೇರ ಇವರು ಕೂಡಲೇ ಮುಕ್ಕ ಶಾಖೆಯ ಮೆಸ್ಕಾಂ ಇಲಾಖೆಗೆ ದೂರವಾಣಿ ಮೂಲಕ ದೂರು ನೀಡಿದ್ದರಿಂದ ಇಲಾಖೆಯ ಸಿಬ್ಬಂದಿಗಳು ಕೂಡಲೇ ಆಗಮಿಸಿ ತುರ್ತು ಕಾಮಗಾರಿಯನ್ನು ನಡೆಸಿದ್ದಾರೆ.

Leave a Reply

Your email address will not be published. Required fields are marked *