ಮೂರ್ತೆದಾರರಿಗೆ ತ್ವರಿತ ಅನುಮತಿ ಕಲ್ಪಿಸಲು ಡಿಸಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ತೆದಾರಿಕೆ ಮಾಡಲು ಪರವಾನಿಗೆ ಪಡೆಯಲು ಬಂದಿರುವ ಅರ್ಜಿಗಳನ್ನು ತಕ್ಷಣ ಪರಿಶೀಲಿಸಿ ತ್ವರಿತ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಮೂರ್ತೆದಾರರ ಸಂಘಟನೆಗಳ ಮುಖಂಡರೊಂದಿಗೆ ಜೊತೆ ಸಭೆ ನಡೆಸಿ ಮಾತಾಡಿದ ಅವರು, ಮೂರ್ತೆದಾರರ ಪರವಾನಿಗೆ ಶುಲ್ಕ ಪಾವತಿ ಬಗ್ಗೆ ವಿವಿಧ ಇಲಾಖೆಗಳ ನಡುವೆ ಗೊಂದಲ ಇದ್ದುದರಿಂದ ಪರವಾನಿಗೆ ವಿಳಂಬವಾಗುತ್ತಿತ್ತು. ಈಗ ಸಮಸ್ಯೆಯನ್ನು ಬಗೆಹರಿಸಿ ತ್ವರಿತವಾಗಿ ಅನುಮತಿ ನೀಡುವಂತೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಅಬಕಾರಿ ಉಪ ಆಯುಕ್ತೆ ಶೈಲಜಾ ಕೋಟೆ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಮೂರ್ತೆದಾರರ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *