ಮೂಡಬಿದ್ರೆ: ಲೂನಾದಿಂದ ಬಿದ್ದು ಸವಾರ ಸಾವು

ವಾಲ್ಪಾಡಿ: ಇಲ್ಲಿನ ಕ್ವಯಕುಡೆಯಲ್ಲಿ ಇಂದು ಬೆಳಗ್ಗೆ ಬೈಕ್ ನಿಂದ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ.
ಅಳಿಯೂರು ವಿಕಾಸನಗರದ ತಿಮ್ಮಪ್ಪ ಮಡಿವಾಳ್(55) ಮೃತಪಟ್ಟ ಸವಾರ. ತಿಮ್ಮಪ್ಪ ಶಿರ್ತಾಡಿ ಪೇಟೆಯಲ್ಲಿ ಹೊಟೇಲ್ ನಡೆಸುತ್ತಿದ್ದು, ಅವರು ಬುದವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಮನೆಯಿಂದ ಶಿರ್ತಾಡಿಯ ಹೋಟೆಲಿನತ್ತ ತಮ್ಮ ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *