ಮುಂಬೈ ಮಹಾನಗರದಲ್ಲಿ ಭಾರೀ ಮಳೆ, ರೆಡ್ ಅಲರ್ಟ್!

ಮುಂಬೈ: ಮಹಾನಗರದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆಗೆ ಓರ್ವ ಮೃತಪಟ್ಟಿದ್ದಾನೆ. ಜನರನ್ನು ಸಮುದ್ರ ತೀರ ಪ್ರದೇಶಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಎಕ್ಸ್ ಪ್ರೆಸ್ ಹೆದ್ದಾರಿ ಕಾಂದಿವಲಿ ಸಬ್ ಅರ್ಬನ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭೂಕುಸಿತ ಉಂಟಾಗಿ ವಾಹನ ಸಂಚಾರ ಕಷ್ಟವಾಗಿದೆ.
ಮುಂಬೈ ಮಹಾನಗರಪಾಲಿಕೆ ವಾಹನ ಸಂಚಾರ ನಿರ್ಬಂಧಿಸಿದೆ. ಕಚೇರಿಗಳು ಬಂದ್ ಆಗಿವೆ. ದಾದರ್, ಪ್ರಭಾದೇವಿ, ವಿರಾರ್- ಅಂಧೇರಿ, ಬಾಂದ್ರಾ-ಚರ್ಚ್ ಗೇಟ್ ಮಾರ್ಗದ ರೈಲು ಸಂಚಾರ ಸ್ಥಗಿತವಾಗಿದೆ. ಕಳೆದ 10 ಗಂಟೆಗಳಲ್ಲಿ 230 ಮಿಮೀ ಮಳೆ ಸುರಿದಿದ್ದು, ಮುಂಬೈ ಕರಾವಳಿ, ಕೊಂಕಣ, ಗೋವಾ, ಕರ್ನಾಟಕ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Leave a Reply

Your email address will not be published. Required fields are marked *