ಮೀಯಪದವು: ತಲವಾರಿನಿ೦ದ ಇರಿದು ಯುವಕನ ಬರ್ಬರ ಕೊಲೆ

ಉಪ್ಪಳ: ಇಲ್ಲಿನ ಮೀಯಪದವು ಎಂಬಲ್ಲಿ ಯುವಕನೊರ್ವನನ್ನು ಇರಿದು ಕೊಲೆಗೈಯಲಾಗಿದೆ. ಇಂದು ನಸುಕಿನ ಜಾವ 1 ಗಂಟೆಯ ವೇಳೆಗೆ ಘಟನೆ ನಡೆದಿದೆ. ಕೂಡಲೇ ಅಣ್ಣುವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯುವ ವೇಳೆ ಅಣ್ಣು ಮ್ರತಪಟ್ಟಿದ್ದಾರೆ. ಕೊಲೆಗೀಡಾದ ಯುವಕನನ್ನು ಬೇರಿಕೆ ಎಂಬಲ್ಲಿ ನ ಅಣ್ಣು ಯಾನೆ ಕೃಪಾಕರ(28) ಎಂದು ಗುರುತಿಸಲಾಗಿದೆ.

ಹಿಂದಿನ ದಿನ ಅಣ್ಣು ಮೀಯಪದವಿನ ಕೆದುಂಗಟ್ಟೆ ಜಿತೇಶ್ ಹಾಗೂ ವಿಜೇಶ್ ಎಂಬವರ ಮನೆಗೆ ಆಕ್ರಮಣ ನಡೆಸಿದ್ದು ಈ ಆಕ್ರಮಣದಲ್ಲಿ ಜಿತೇಶ್ ಹಾಗೂ ವಿಜೇಶ್ ಗೆ ಗಂಭೀರ ಗಾಯಗಳುಂಟಾಗಿದ್ದು ಇವರನ್ನು ಕಾಸರಗೋಡು ಸರಕಾರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಕ್ರಮಣದ ಪ್ರತಿಕಾರವೇ ಈ ಘಟನೆ ಎಂಬುದು ಇದುವರೆಗೆ ಖಚಿತಗೊಂಡಿಲ್ಲ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ

Leave a Reply

Your email address will not be published. Required fields are marked *