ಮಿಂಚಿದ ಮುಜೀಬ್-ಎಡ್ವರ್ಡ್ಸ್ ಜಮೈಕಾ ತಲ್ಲವಾಹ್ಸ್‌ಗೆ ಗೆಲುವು

ಪೋರ್ಟ್ ಆಫ್ ಸ್ಪೇನ್: ಮುಜೀಬ್ ಉರ್ ರೆಹ್ಮಾನ್ ಹಾಗೂ ಫಿಡೆಲ್ ಎಡ್ವರ್ಡ್ಸ್ ನಡೆಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಗಯಾನ ಅಮೆಜಾನ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಜಮೈಕಾ ತಲ್ಲವಾಹ್ಸ್ ಐದು ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಗಯಾನ ಅಮೆಜಾನ್ ವಾರಿಯರ್ಸ್ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅದರಲ್ಲೂ ಮುಜೀಬ್ ಹಾಗೂ ಎಡ್ವರ್ಡ್ಸ್ ಬೌಲಿಂಗ್ ದಾಳಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡುವಲ್ಲಿ ವಾರಿಯರ್ಸ್ ಎಡವಿತು. ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೦೮ ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಗಯಾನ ಪರ ರಾಸ್ ಟೇಲರ್ (೨೩) ಹಾಗೂ ನವೀನ್ ಉಲ್ ಹಕ್ (೨೦) ಕೆಲಹೊತ್ತು ಹೋರಾಟಕಾರಿ ಇನ್ನಿಂಗ್ಸ್ ನಡೆಸಿದ್ದರು. ಜಮೈಕಾ ಪರ ಮುಜೀಬ್ ಹಾಗೂ ಎಡ್ವರ್ಡ್ಸ್ ತಲಾ ಮೂರು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಜಮೈಕಾ ೧೮ ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ೧೧೩ ರನ್ ಗಳಿಸಿ, ಜಯ ಸಾಧಿಸಿತು. ಜಮೈಕಾ ಪರ ಗ್ಲೆನ್ ಫಿಲಿಪ್ಸ್ (೨೬) ಹಾಗೂ ಜರ್ಮೈನ್ ಬ್ಲ್ಯಾಕ್‌ವುಡ್ (೨೩) ಕೆಲಹೊತ್ತು ಕ್ರೀಸ್‌ನಲ್ಲಿದ್ದು, ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೆ ಅಂತಿಮ ಹಂತದಲ್ಲಿ ಬೊನ್ನರ್ (೩೦) ಹಾಗೂ ಆಂಡ್ರೆ ರಸೆಲ್ (೨೩) ಇಬ್ಬರೂ ಅಜೇಯ ಇನ್ನಿಂಗ್ಸ್ ಪ್ರದರ್ಶಿಸಿ, ಮಿಂಚಿದರು. ಗಯಾನ ಪರ ನವೀನ್ ಉಲ್ ಹಕ್ ಎರಡು ವಿಕೆಟ್ ಪಡೆದರು.