ಮಾಣಿ: ಚಲಿಸುತ್ತಿದ್ದ ಕಾರಿಗೆ ಬಿದ್ದ ಆಲದ ಮರ, ಕಾರ್ ನಜ್ಜುಗುಜ್ಜು!

ಮಂಗಳೂರು: ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಆಲದ ಮರ ಉರುಳಿಬಿದ್ದ ಘಟನೆ ಇಂದು ಸಂಜೆ ನಡೆದಿದ್ದು ಕಾರ್ ಸಂಪೂರ್ಣ ಜಖಂಗೊಂಡಿದೆ.
ಸೂರಿಕುಮೇರು ಬಳಿ ಹೆದ್ದಾರಿ ಬದಿಯಲ್ಲೇ ಹಳೆಯದಾದ ಆಲದ ಮರ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರ್ ಜಖಂಗೊಂಡು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
