ಮಹಿಳಾ ಸಿಬ್ಬಂದಿಗೆ ಕಿಸ್ ಕೊಟ್ಟ `ತಹಶೀಲ್ದಾರ್’ ವಿಡಿಯೋ ವೈರಲ್!

ಕೊಪ್ಪಳ: ತನ್ನ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಿಸ್ ಕೊಟ್ಟು ರಾಸಲೀಲೆಯಾಡಿರುವ ಕುಷ್ಟಗಿ ತಹಶೀಲ್ದಾರ್ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ. ತಹಶೀಲ್ದಾರ್ ರಾಸಲೀಲೆಯ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ಸರಸ ಸಲ್ಲಾಪ ನಡೆಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಕುಷ್ಟಗಿಯಲ್ಲಿನ ನಗರಾಭಿವೃದ್ಧಿ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುಬಸವರಾಜ್ ವಿರುದ್ಧ ಆರೋಪ ಕೇಳಿಬಂದಿದೆ.
ಗುರುಬಸವರಾಜ್ ಎರಡು ತಿಂಗಳ ಹಿಂದೆ ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಚೇರಿಯಲ್ಲೇ ಕಿಸ್ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ದೃಶ್ಯ ವೈರಲ್ ಆಗಿದೆ. ಗುರುಬಸವರಾಜ್ ಸದ್ಯ ಅಲ್ಲಿಂದ ವರ್ಗಾವಣೆಯಾಗಿದ್ದಾರೆ.