`ಮನೆಯಲ್ಲೇ ರಾಮಮಂದಿರ ಭೂಮಿಪೂಜೆಯನ್ನು ಸಂಭ್ರಮಿಸಿ, ಪಟಾಕಿ ಸಿಡಿಸದಿರಿ’

ಮಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನಡೆಯಲಿದೆ. ಜಿಲ್ಲೆಯಲ್ಲಿ ಸೆಕ್ಷನ್ 144ರನ್ವಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಹೀಗಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಸಂಭ್ರಮಾಚರಣೆ ಮಾಡುವುದು ಬೇಡ, ಬದಲಿಗೆ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಿ ಸಂಭ್ರಮಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಹೇಳಿದ್ದಾರೆ.
ಅಯೋಧ್ಯೆ ವಿಚಾರ ಸೂಕ್ಷ್ಮತೆಯಿಂದ ಕೂಡಿದ್ದು ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದ ನಳಿನ್ ಕುಮಾರ್, ದೇವಸ್ಥಾನಗಳಲ್ಲೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ದೀಪ ಬೆಳಗಿಸಿ ಎಂದಿದ್ದಾರೆ. ನಾಳೆ ಮುಂಜಾನೆ 8 ಗಂಟೆಯಿಂದ 12 ಗಂಟೆಯವರೆಗೆ ರಾಮಮಂದಿರ ಭೂಮಿಪೂಜೆ ಟಿವಿಯಲ್ಲಿ ನೇರ ಪ್ರಸಾರಗೊಳ್ಳಲಿದೆ.

Leave a Reply

Your email address will not be published. Required fields are marked *