ಮಧೂರು: ಹೊಳೆಯಲ್ಲಿ ಮುಳುಗಿ ಯುವಕ ಮೃತ್ಯು

ಮಂಗಳೂರು: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕನೋರ್ವ ನೀರುಪಾಲಾದ ಘಟನೆ ಮಧೂರಿನಲ್ಲಿ ನಡೆದಿದೆ. ಮೃತರನ್ನು ಮಂಗಳೂರು ಎಕ್ಕೂರು ನಿವಾಸಿ ವಿನೋದ್(35) ಎಂದು ಹೆಸರಿಸಲಾಗಿದೆ. ವಿನೋದ್ ಮಧೂರು ಸೇತುವೆ ಬಳಿಯ ಹೊಳೆಯಲ್ಲಿ ಸ್ನಾನಕ್ಕಿಳಿದ ವೇಳೆ ಕೊಚ್ಚಿಕೊಂಡು ಹೋಗಿದ್ದರು. ಅಗ್ನಿಶಾಮಕದಳ, ಮುಳುಗುತಜ್ಞರ ಸಹಕಾರದಲ್ಲಿ ಮಧೂರು ಹೊಳೆ ಬದಿಯಿಂದ ಮೃತದೇಹ ಮೇಲಕ್ಕೆತ್ತಲಾಗಿದೆ. ಅವಿವಾಹಿತರಾದ ವಿನೋದ್ ಮಧೂರು ಕೊಲ್ಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *