ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಸುಳ್ಯ ಮೂಲದ ಮದ್ರಸಾ ಶಿಕ್ಷಕನ ನೀಚಕೃತ್ಯ ಬಯಲು!

ಮಂಗಳೂರು: ಸುಳ್ಯ ಸಮೀಪದ ಕಲ್ಲುಗುಂಡಿ ನಿವಾಸಿ ನೀಲೇಶ್ವರದ ಮದ್ರಸಾದಲ್ಲಿ ಶಿಕ್ಷಕನಾಗಿದ್ದ ವ್ಯಕ್ತಿ ಇತರ ಐವರ ಜೊತೆ ಸೇರಿಕೊಂಡು ತನ್ನ ಅಪ್ರಾಪ್ತ ಮಗಳನ್ನೇ ಸಾಮೂಹಿಕ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಪ್ರಕರಣದ ಮತ್ತಷ್ಟು ಕರಾಳತೆ ಬಯಲಾಗಿದೆ. ಮದ್ರಸಾ ಶಿಕ್ಷಕ ಗರ್ಭಿಣಿಯಾಗಿದ್ದ ತನ್ನ ಮಗಳ ಭ್ರೂಣವನ್ನು ಮಣ್ಣಿನಡಿ ಹೂತಿಟ್ಟ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
50ರ ಹರೆಯದ ಮದ್ರಸಾ ಶಿಕ್ಷಕ ಸ್ನೇಹಿತರಾದ ಮುಹಮ್ಮದ್ ರಿಯಾಝ್, ಮುಹಮ್ಮದ್ ಶರೀಫ್, ಅಹ್ಮದ್, ಇಜಾಝ್ ಜೊತೆ ಸೇರಿಕೊಂಡು ತನ್ನ ಮಗಳ ಮೇಲೆ ಕಳೆದೆರಡು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದು ಈ ಬಗ್ಗೆ ಬಾಲಕಿ ನೀಲೇಶ್ವರ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. 2007ರಲ್ಲಿ ಬೇಕಲದಲ್ಲಿ ಅಧ್ಯಾಪಕನಾಗಿದ್ದ ವೇಳೆ ಮದ್ರಸಾಕ್ಕೆ ಕಲಿಯಲು ಬರುತ್ತಿದ್ದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗದ್ದ ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಮಗಳ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಈತ ಮಗಳು ಗರ್ಭ ಧರಿಸಿದ್ದು ಆಕೆಯ ಭ್ರೂಣವನ್ನು ಮಣ್ಣಿನಡಿ ಹೂತಿಟ್ಟಿದ್ದನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿಯ ವಿರುದ್ಧ ಅಕ್ರಮ ಭ್ರೂಣಹತ್ಯೆ, ಪೊಕ್ಸೊ, ಬಾಲಾಪರಾಧಿ ನ್ಯಾಯ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಸೇರಿದಂತೆ ವಿವಿಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ತಾಯಿಯೂ ಈತನ ಜೊತೆ ಸಹಕರಿಸಿದ್ದ ದೂರು ಕೇಳಿಬಂದಿದೆ.

Leave a Reply

Your email address will not be published. Required fields are marked *