ಮಗನಿಗೆ ಪರೀಕ್ಷೆ ಬರೆಯಲು 105 ಕಿ.ಮೀ. ಸೈಕಲ್ ತುಳಿದ ತಂದೆ!

ಭೋಪಾಲ್: ಮಗನಿಗೆ ಪರೀಕ್ಷೆ ಬರೆಯಲು ಸಂಚಾರಕ್ಕೆ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ 38 ವರ್ಷದ ತಂದೆಯೋರ್ವ ತನ್ನ 15 ವರ್ಷದ ತನ್ನ ಮಗ ಆಶಿಷ್ ನನ್ನು ಕರೆದುಕೊಂಡು ಬರೋಬ್ಬರಿ 105 ಕಿ.ಮೀ. ದೂರ ಸೈಕಲ್ ತುಳಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 10ನೇ ತರಗತಿ ಓದುತ್ತಿದ್ದ ಮಗನ ಪೂರಕ ಪರೀಕ್ಷೆ ತಪ್ಪಿಸಿಕೊಂಡಲ್ಲಿ ಒಂದು ವರ್ಷ ವ್ಯರ್ಥವಾಗುತ್ತದೆ. ಹೀಗಾಗಿ ಮಗನನ್ನು ಸೈಕಲ್ ನಲ್ಲಿ ಕರೆದೊಯ್ದೆ ಎಂದು ತಂದೆ ಶೋಭ್ರಾಮ್ ತಿಳಿಸಿದ್ದಾರೆ.
ಘಟನೆಯ ವಿವರ:
ಧಾರ್ ಜಿಲ್ಲೆಯ ಬಾಯ್ದಿಪುರ್ ಮೂಲದ ಶೋಭ್ರಾಮ್ ತನ್ನ ಮಗನನ್ನು ಸೈಕಲ್ ನಲ್ಲಿ ಕೂರಿಸಿಕೊಂಡು 105 ಕಿ.ಮೀ ದೂರದ ಮನವಾರ್ ತೆಹ್ಸಿಲ್ ನಲ್ಲಿರುವ ಪರೀಕ್ಷೆ ಕೇಂದ್ರದವರೆಗೂ ಕರೆದುಕೊಂಡು ಹೋಗಿರುವ ಸುದ್ದಿಯಾಗಿದ್ದಾರೆ. ಕೊರೊನಾ ಭೀತಿ ಮತ್ತು ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆ ಅನೇಕ ವಿದ್ಯಾರ್ಥಿಗಳು 10ನೇ ತರಗತಿ ಅಂತಿಮ ಪರೀಕ್ಷೆಯಿಂದ ತಪ್ಪಿಸಿಕೊಂಡಿದ್ದರು. ಅಂಥ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿತ್ತು. ಆದರೆ ಪರೀಕ್ಷೆಗೆ ಹಾಜರಾಗಲು ಸರಿಯಾದ ಸಾರಿಗೆ ವ್ಯವಸ್ಥೆಯಿರಲಿಲ್ಲ. ಈ ಬಾರಿ ಪರೀಕ್ಷೆಯಿಂದ ತಪ್ಪಿಸಿಕೊಂಡಲ್ಲಿ ತಮ್ಮ ಮಗನ ಮುಂದಿನ ಒಂದು ವರ್ಷ ವ್ಯರ್ಥವಾಗುತ್ತಿತ್ತು. ಹೀಗಾಗಿ ಸೈಕಲ್ ನಲ್ಲಿಯೇ 105 ಕಿಲೋ ಮೀಟರ್ ಕರೆದುಕೊಂಡು ಹೋಗಲು ತೀರ್ಮಾನಿಸಿದೆ ಎಂದು ತಂದೆ ಶುಭ್ರಾಮ್ ತಿಳಿಸಿದ್ದಾರೆ. ಪರೀಕ್ಷೆ ಆರಂಭಕ್ಕೂ ಮೂರು ದಿನ ಮೊದಲೇ ತಂದೆ-ಮಗ ಸೈಕಲ್ ಏರಿದ್ದರು. ತಮ್ಮೊಟ್ಟಿಗೆ ಅಗತ್ಯವಿರುವ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಕಳೆದ ಸೋಮವಾರ ರಾತ್ರಿ ಮನಾವರ್ ನಲ್ಲಿ ತಂಗಿದ್ದರು. ಮರುದಿನ ಮಂಗಳವಾರ ಬೆಳಗ್ಗೆ ಪರೀಕ್ಷೆ ಆರಂಭವಾಗುವುದಕ್ಕೂ ಕೆಲವು ಗಂಟೆಗಳ ಮೊದಲೇ ಧಾರ್ ನಲ್ಲಿರುವ ಭೋಜ್ ಶಾಲೆಯ ಪರೀಕ್ಷಾ ಕೇಂದ್ರವನ್ನು ತಲುಪಿದ್ದರು. ತಂದೆಯ ಪರಿಶ್ರಮಕ್ಕೆ 15 ವರ್ಷದ ಮಗ ಆಶಿಷ್ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *