ಮಂಜೇಶ್ವರ: 3 ಮಂದಿ ಸೋದರಿಯರು ನಿಗೂಢ ನಾಪತ್ತೆ!

ಮಂಗಳೂರು: ಮೂರು ಮಂದಿ ಸೋದರಿಯರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಂಜೇಶ್ವರದಲ್ಲಿ ಬೆಳಕಿಗೆ ಬಂದಿದೆ. ಮಂಜೇಶ್ವರ ಸಮೀಪದ ಮೀಯಪದವು ನಿವಾಸಿಗಳಾದ 16, 17 ಹಾಗೂ 21 ವಯಸ್ಸಿನ ಸೋದರಿಯರು ನಾಪತ್ತೆಯಾಗಿದ್ದು ಮನೆಮಂದಿ ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಆತಂಕಕ್ಕೂ ಕಾರಣವಾಗಿದೆ. ಆಗಸ್ಟ್ 16ರಂದು ಮೂರು ಮಂದಿ ಜೊತೆಯಲ್ಲೇ ಆಸ್ಪತ್ರೆಗೆಂದು ಹೋಗಿದ್ದು ಬಳಿಕ ವಾಪಸ್ ಆಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ನಾಪತ್ತೆಯಾಗಿರುವ ಮೂವರಲ್ಲಿ ಓರ್ವ ಯುವತಿ ಕೆಲದಿನಗಳಿಂದ ಹೊಸ ಮೊಬೈಲ್ ಫೋನ್ ಬಳಸುತ್ತಿದ್ದು ಈ ಬಗ್ಗೆ ಮನೆಮಂದಿ ವಿಚಾರಿಸಿದ್ದರು. ಈ ವೇಳೆ ಆಕೆ ಸರಿಯಾಗಿ ಉತ್ತರಿಸಿರಲಿಲ್ಲ. ಇದರಿಂದ ಗಲಾಟೆ ನಡೆದಿತ್ತು ಎಂದು ಹೇಳಲಾಗುತ್ತಿದೆ. ಈ ಘಟನೆಯ ಬಳಿಕ ಮೂವರೂ ನಾಪತ್ತೆಯಾಗಿದ್ದು ನಿಗೂಢತೆ ಸೃಷ್ಟಿಸಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪತ್ತೆಹಚ್ಚಲು ಸೈಬರ್ ಸೆಲ್ ನೆರವು ಪಡೆದಿದ್ದಾರೆ.