ಮಂಜೇಶ್ವರ: ಸಂಬಂಧಿಯಿಂದಲೇ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ಮಂಜೇಶ್ವರ: ಒಂದೇ ಕುಟುಂಬದ ನಾಲ್ವರನ್ನು ಸಂಬಂಧಿಯೇ ಕಡಿದು ಕೊಲೆಗೈದ ಘಟನೆ ಮಂಜೇಶ್ವರದ ಬಾಯಾರು ಸಮೀಪದ ಸುದೆಂಬಳ ಗುರುಕುಮೇರಿ ಎಂಬಲ್ಲಿ ಇಂದು ರಾತ್ರಿ ನಡೆದಿದೆ.
ಬಾಬು , ವಿಠಲ , ಸದಾಶಿವ, ದೇವಕಿ ಸೇರಿದಂತೆ ನಾಲ್ವರು ಬರ್ಬರ ಹತ್ಯೆಯಾದವರು. ಸಂಬಂಧಿಯಾಗಿರುವ ಉದಯ ಎಂಬಾತ ಕೃತ್ಯ ಎಸಗಿದ್ದು ಆತ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ. ಸ್ಥಳೀಯರು ಆರೋಪಿ ಉದಯನನ್ನು ಕಟ್ಟಿಹಾಕಿ ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Reply

Your email address will not be published. Required fields are marked *