ಮಂಜೇಶ್ವರ: ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ತಾಯಿ-ಮಗ ಮೃತ್ಯು

ಮಂಜೇಶ್ವರ: ಠಾಣಾ ವ್ಯಾಪ್ತಿಯ ವರ್ಕಾಡಿ ಸಮೀಪದ ಕುಂಟಪದವು ಬೋಳಂತಕೊಡಿ ಎಂಬಲ್ಲಿ ಮನೆಯಂಗಳದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದ ಪರಿಣಾಮ ತಾಯಿ ಮತ್ತು ಮಗ ದಾರುಣ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ವಿಜಯ(32) ಮತ್ತು ಆಶಯ್(6) ಮೃತ ದುರ್ದೈವಿಗಳು.
ಆಶಯ್ ಮನೆಯ ಹೊರಗಡೆ ಆಟವಾಡುತ್ತಿದ್ದ ವೇಳೆ ಕಡಿದು ಬಿದ್ದ ವಿದ್ಯುತ್ ವೈರ್ ತುಳಿದು ಸಾವನ್ನಪ್ಪಿದ್ದರೆ ಈತನನ್ನು ರಕ್ಷಿಸಲು ಧಾವಿಸಿದ ತಾಯಿ ವಿಜಯಾ ಕೂಡಾ ವಿದ್ಯುತ್ ಆಘಾತಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಮನೆಯ ತಾಯಿ-ಮಗನನ್ನು ಕಳೆದುಕೊಂಡ ಮನೆಮಂದಿಯ ರೋಧನ ಮುಗಿಲುಮುಟ್ಟಿತ್ತು. ಘಟನಾಸ್ಥಳಕ್ಕೆ ಮಂಜೇಶ್ವರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *