ಭಾಸ್ಕರ ಶೆಟ್ಟಿ ಹತ್ಯೆ: ನಿರಂಜನ್ ಭಟ್ ಜಾಮೀನು ಅರ್ಜಿ ವಜಾ

ಮಲ್ಪೆ: ಹೋಟೆಲ್ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಿರಂಜನ ಭಟ್ ಹೈಕೋರ್ಟ್ ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕøತವಾಗಿದೆ. ಆರೋಪಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯೂ ವಜಾಗೊಂಡಿದೆ.
ಪ್ರಕರಣದ ಪ್ರಧಾನ ಆರೋಪಿ ಹತ್ಯೆಗೀಡಾದ ಭಾಸ್ಕರ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ನಿರಂಜನ್ ಭಟ್ ಮತ್ತು ಭಾಸ್ಕರ ಶೆಟ್ಟಿಯ ಮಗ ನವನೀತ್ ಶೆಟ್ಟಿ ಜೈಲಲ್ಲಿದ್ದಾರೆ. ಭಾಸ್ಕರ ಶೆಟ್ಟಿಯನ್ನು 2016ರ ಜು.28ರಂದು ಹತ್ಯೆ ಮಾಡಲಾಗಿತ್ತು. ಜ್ಯೋತಿಷಿಯಾಗಿದ್ದ ನಿರಂಜನ್ ಭಟ್ ತನ್ನ ಮನೆಯ ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿಯ ಶವವನ್ನು ಹಾಕಿ ಸುಟ್ಟಿದ್ದ ಆರೋಪ ಹೊತ್ತಿದ್ದಾನೆ.