ಭಾರೀ ಮಳೆಗೆ ದ್ವೀಪದಂತಾದ ಬಂಟ್ವಾಳ! ಜನರಲ್ಲಿ ಆತಂಕ

ಮಂಗಳೂರು: ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ. ನದಿಯ ತೀರಪ್ರದೇಶದ ನಿವಾಸಿಗಳಲ್ಲಿ ಆತಂಕ ಎದುರಾಗಿದ್ದರೆ ತಗ್ಗು ಪ್ರದೇಶವಾದ ಬಂಟ್ವಾಳ, ಬಡ್ಡಕಟ್ಟೆ ಪ್ರದೇಶ ದ್ವೀಪದಂತಾಗಿದೆ. ಮನೆ, ತೋಟಕ್ಕೆ ನೀರು ನುಗ್ಗಿದ ಪರಿಣಾಮ ಅಂಗಡಿ ಮುಂಗಟ್ಟು, ಮನೆಗಳು ನೀರಲ್ಲಿ ಮುಳುಗಿವೆ.
ಬಂಟ್ವಾಳ-ಜಕ್ರಿಬೆಟ್ಟು ರಸ್ತೆ, ಗೂಡಿನಬಳಿ ಪ್ರದೇಶದಲ್ಲಿ ನದಿಯ ನೀರು ಮನೆಗಳಿಗೆ ನುಗ್ಗಿದ್ದು ವ್ಯಾಪಕ ಹಾನಿಯಿಂಟಾಗಿದೆ. ರಸ್ತೆಯಲ್ಲೇ ಮಳೆಯ ನೀರು ಹರಿಯುತ್ತಿರುವ ಪರಿಣಾಮ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮೆಲ್ಕಾರ್-ಪಾಣೆಮಂಗಳೂರು ರಸ್ತೆ ಸಂಪೂರ್ಣ ಬಂದ್ ಆಗಿದ್ದು ವಾಹನ ಸವಾರರು ಸಂಚಾರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *